ಸಹಕಾರಿ ಸಪ್ತಾಹ: ವಿವಿಧಡೆ ಸಂಭ್ರಮದ ಧ್ವಜಾರೋಹಣ


ಸಂಜೆವಾಣಿ ವಾರ್ತೆ
ಹೊಸಪೇಟೆ ನ.15: ನೂತನ ವಿಜಯನಗರ ಜಿಲ್ಲೆಯಾದ್ಯಂತ ಸಪ್ತವರ್ಣದ ಧ್ವಜಾರೋಹಣದೊಂದಿಗೆ ಅಖಿಲಿ ಭಾರತ ಸಹಕಾರಿ ಸಪ್ತಾಹಕ್ಕೆ ಚಾಲನೆ ನೀಡಲಾಗಿದೆ.
ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್, ಸಹಕಾರ ಇಲಾಖೆಗಳಲ್ಲಿ ಹಾಗೂ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳಲ್ಲಿ 70ನೇ ಅಖಿಲ ಭಾರತ ಸಹಕಾರಿ ಸಪ್ತಾಹವನ್ನು ಸಪ್ತವರ್ಣದ ಧ್ವಜಾರೋಹಣದೊಂದಿಗೆ ವಿಜಯನಗರ ಜಿಲ್ಲೆಯಾದ್ಯಂತ ಆಚರಣೆಗೆ ಚಾಲನೆ ನೀಡಲಾಯಿತು.
ಯೂನಿಯನ್: ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್‍ನಲ್ಲಿ ಯೂನಿಯನ್ ಅಧ್ಯಕ್ಷರು, ರಾಜ್ಯ ಸಹಕಾರಿ ಮಹಾಮಂಡಳದ ನಿರ್ದೇಶಕರು ಹಾಗೂ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರು ಆದ ಜೆ.ಎಂ.ಶಿವಪ್ರಸಾದ್ ಯೂನಿಯನ್ ಕಚೇರಿಯಲ್ಲಿ ಸಪ್ತವರ್ಣದ ಧ್ವಜಾರೋಹಣ ನೆರವೇರಿಸಿದರು.  ಆಡಳಿತ ಮಂಡಳಿಯ ನಿರ್ದೇಶಕರಾದ ಗೌಳಿಕುಮಾರ, ರವಿಕುಮಾರ ಸಹಾಯಕ ನಿಬಂಧಕರು, ಅಯ್ಯಾಳಿ ಶಂಕ್ರಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಸೇರಿದಂತೆ ಇತರರು ಹಾಜರಿದ್ದರು.
ವಿಕಾಸ ಬ್ಯಾಂಕ್: ಸ್ಥಳೀಯ ವಿಕಾಸ ಬ್ಯಾಂಕ್‍ನಲ್ಲಿ ನಡೆದ ಸಹಕಾರಿ ಸಪ್ತಾಹವನ್ನು ಬ್ಯಾಂಕ್ ವ್ಯವಸ್ಥಾಪನಾ ಮಂಡಳಿಯ ನಿರ್ದೇಶಕರಾದ ಚಂದಾಹುಸೇನ್ ಧ್ವಜಾರೋಹಣದೊಂದಿಗೆ ನೆರವೇರಿಸಲಾಯಿತು. ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ ಹಿರೇಮಠ, ನಿರ್ದೇಶಕರಾದ ಎಂ.ವೆಂಕಪ್ಪ, ಕೆ.ವಿಕಾಸ, ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ, ಪ್ರಧಾನ ಕಚೇರಿಯ ಸಿಬ್ಬಂದಿಗಳು ವ್ಯವಸ್ಥಾಪಕರು ಸಿಬ್ಬಂದಿ ಪಾಲ್ಗೊಂಡಿದ್ದರು.
ಬಿಡಿಸಿಸಿ ಬ್ಯಾಂಕ್: 70ನೇ ಅಖಿಲ ಭಾರತ ಸಹಕಾರಿ ಸಪ್ತಾಹವನ್ನು ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್, ಸಿಬ್ಬಂದಿಗಳು  ಧ್ವಜಾರೋಹಣದೊಂದಿಗೆ ನೆರವೇರಿಸಿದರು. ಉಳಿದಂತೆ ಕೃತಿಕಾ ಪತ್ತಿನ ಸೌಹಾರ್ದ ಸಹಕಾರಿ, ಜನನಿ ವಿವಿದ್ದೋದೇಶ ಸಹಕಾರಿ ಸಂಘ, ಸಹಾಯಕ ನಿಬಂಧಕರ ಕಛೇರಿ ಸೇರಿದಂತೆ ವಿವಿದ ಸಹಕಾರಿ ಸಂಘಗಳಲ್ಲಿ ಸಹ ಸಹಕಾರಿ ಸಪ್ತಾಹದ ಪ್ರಯುಕ್ತ ಧ್ವಜಾರೋಹಣದೊಂದಿಗೆ ಸಹಕಾರಿ ಸಪ್ತಾಹವನ್ನು ಆಚರಿಸಲಾಯಿತು.