ಸಹಕಾರಿ ಸಂಘ ಉದ್ಘಾಟನೆ

ನೇಸರಗಿ,ಮಾ24: ಸಹಕಾರಿ ಸಂಘಗಳು ಸಮಾಜದಲ್ಲಿ ಸಹಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಸಮೀಪದ ಮತ್ತಿಕೊಪ್ಪ ಗ್ರಾಮದಲ್ಲಿ ಅಡವಿ ಶಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಗದಗದಲ್ಲಿ ಸಹಕಾರಿ ರಂಗದ ದುರೀಣ ಸಿದ್ದನಗೌಡ ಪಾಟೀಲರು ಸಹಕಾರಿ ಸಂಘಗಳನ್ನು ಹುಟ್ಟು ಹಾಕಿದರು.ಇಂದು ಸಹಕಾರಿ ಸಂಸ್ಥೆಗಳು ಸಾಲ, ವಿವಿಧ ಸೌಲತ್ತು ನೀಡಿ ಮೇಲುಗೈ ಸಾಧಿಸಿವೆ. ರಾಜ್ಯದಲ್ಲಿ ಶೂನ್ಯ ದರದಲ್ಲಿ ಸಾಲ ನೀಡುತ್ತಿವೆ. ಪ್ರತಿ ಮೂರು ವರ್ಷಕ್ಕೊಮ್ಮೆ ಸಾಲ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತದೆ. ಮಹಾಂತೇಶ ಮತ್ತಿಕೊಪ್ಪ ನೇತೃತ್ವದ ಸಹಕಾರಿ ಸಂಘವು ಉತ್ತಮ ಸಾಧನೆ ಮಾಡಲಿ ಎಂದರು.
ಮಾಜಿ ಜಿ.ಪಂ ಸದಸ್ಯ ಈಶ್ವರ ಉಳ್ಳೆಗಡ್ಡಿ, ಯರಡಾಲ ಪಿಕೆಪಿಎಸ್ ಅಧ್ಯಕ್ಷ ಈರಣ್ಣ ವಾರದ, ಡಾ.ಪ್ರಕಾಶ ಹಳ್ಯಾಳ, ಸುತಗಟ್ಟಿ ಪಿಕೆಪಿಎಸ್ ಅಧ್ಯಕ್ಷ ಆರ್.ಸಿ.ಪಾಟೀಲ ಮಾತನಾಡಿ, ಗ್ರಾಮದ ಅಭಿವೃದ್ದಿಯಲ್ಲಿ ಪಿಕೆಪಿಎಸ್‍ಗಳು ಮಹತ್ವದ ಪಾತ್ರ ವಹಿಸುತ್ತವೆ. ಸಹಕಾರ ತತ್ವದಡಿ ಸಂಘಗಳು ಉತ್ತಮ ಕಾರ್ಯ ಮಾಡುವಂತಾಗಲಿ ಎಂದರು.
ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ಸಾನಿದ್ಯ ವಹಿಸಿದ್ದರು.ಸೋಮೆಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೆಶಕ ಶ್ರೀಕರ ಕುಲಕರ್ಣಿ, ಅರ್ಬನ್ ಬ್ಯಾಂಕ್ ನಿರ್ದೆಶಕ ಎಸ್.ಎಂ.ಪಾಟೀಲ, ಟಿಎಪಿಎಂಸಿ ನಿರ್ದೆಶಕ ಕುಮಾರಗೌಡ ಪಾಟೀಲ, ಬಿಜೆಪಿ ಮುಖಂಡ ಶ್ಯಾಮ ಶಿಲ್ಲೇದಾರ, ಗ್ರಾ.ಪಂ ಸದಸ್ಯ ಯಲ್ಲನಗೌಡ ದೊಡ್ಡಗೌಡರ, ಸುತಗಟ್ಟಿ ಪಿಕೆಪಿಎಸ್ ಉಪಾಧ್ಯಕ್ಷ ಸುರೇಶ ಲಕ್ಕುಂಡಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸೋಮಪ್ಪ ತಕ್ಕುನವರ, ಮಾಜಿ ತಾ.ಪಂ ಸದಸ್ಯ ಶ್ರೀಶೈಲ ಕಮತಗಿ,ಪತ್ರಕರ್ತ ಸಿ.ವಾಯ್.ಮೆಣಶಿನಕಾಯಿ, ಬಸನಗೌಡ ಪಾಟೀಲ, ಪಿಕೆಪಿಎಸ್ ಉಪಾಧ್ಯಕ್ಷ ಅಡಿವೆಪ್ಪ ಹೊಸಮನಿ, ಎನ್.ಸಿ.ದೇಯನ್ನವರ,ನೇಸರಗಿ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕ ಸುಭಾಸ ಪಾಟೀಲ, ಮೊದಲಾದವರು ಇದ್ದರು.
ಪ್ರಕಾಶ ಮೊಹರೆ ಸ್ವಾಗತಿಸಿದರು. ಸಂತೋಷ ಚಡಿಚಾಳ ನಿರೂಪಿಸಿದರು. ಅಶೋಕ ಲೆಂಕೆನ್ನವರ ವಂದಿಸಿದರು.