ಸಹಕಾರಿ ಸಂಘದಿಂದ ನೀರಿನ ಅರವಟಿಗೆ ಪ್ರಾರಂಭ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.10: ತಾಲ್ಲೂಕು ಆಡಳಿತ ಮತ್ತು ನಗರಸಭೆ ಹಾಗೂ ವಿಷ್ಣು ವಿಲಾಸ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಸಹಯೋಗದೊಂದಿಗೆ ನೀರಿನ ಅರವಟ್ಟಿಗೆ ಕೇಂದ್ರವನ್ನು ತಹಶೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದಿಂದ ವಿವಿಧ ಉದ್ದೇಶಗಳಿಗೆ ತಾಲ್ಲೂಕು ಕೇಂದ್ರಕ್ಕೆ ಬರುತ್ತಿದ್ದು, ಬೇಸಿಗೆ ಪ್ರಾರಂಭವಾಗಿರುವುದರಿಂದ ಇಂತಹ ಅರವಟ್ಟಿಗೆ ಕೇಂದ್ರದ ಕುಡಿಯುವ ನೀರು ದೊರೆಯುವುದು ಉತ್ತಮ ಸಹಕಾರಿಯಾಗಿದೆ, ಸರ್ಕಾರದೊಂದಿಗೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸಹಕಾರದಿಂದ ಮೂಲಭೂತ ಸೌಲಭ್ಯಗಳ ಸದ್ಬಳಿಕೆ ಸಾಧ್ಯವಾಗುತ್ತದೆಂದು ತಿಳಿಸಿದರು.
ತಹಶೀಲ್ದಾರ್ ಕಛೇರಿ ಮತ್ತು ನಗರಸಭೆ ಕಾರ್ಯಾಲಯದ ಮುಂದೆ ನೀರಿನ ಅರವಟ್ಟಿಕೆ ಕೇಂದ್ರ ಪ್ರಾರಂಭಿಸಲಾಗಿದೆ.
ನಗರಸಭೆ ಪೌರಾಯುಕ್ತ ಕೆ.ಜೀವನ್ ಕಟ್ಟಿಮನಿ, ಸಹಕಾರಿ ಅಧ್ಯಕ್ಷ ಎಚ್.ಜೆ.ಹನುಮಂತಯ್ಯ, ನಿರ್ದೇಶಕರಾದ ಬದ್ರಿನಾಥ, ಶ್ರೀರಾಮ, ಸಂತೋಷ, ಸುರೇಶ, ನಾಗರಾಜ ವೆಂಕಟನರಸಯ್ಯ, ಸೂರ್ಯಪ್ರಕಾಶ, ಮುಖ್ಯಕಾರ್ಯ ನಿರ್ವಾಹಕ ಬಿ.ಅನಿಲ್ ಕುಮಾರ್ ಹಾಗೂ ಸಿಬ್ಬಂದಿ ಇದ್ದರು.