ಸಹಕಾರಿ ರಥಕ್ಕೆ ಚಾಲನೆ 

ಉಡುಪಿ, ನ.೧೩-  ನ.14ರಿಂದ 21ರವರೆಗೆ ನಡೆಯುವ ರಾಜ್ಯ ಮಟ್ಟದ 69ನೇ ಅಖಿಲ ಭಾರತ ಸಹಕಾರಿ ಸಪ್ತಾಹದ  ಅಂಗವಾಗಿ ಉಡುಪಿ ಪುರಭವನ ಆವರಣದಲ್ಲಿ ಸಹಕಾರಿ ರಥಕ್ಕೆ ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಸಹಕಾರಿ ಧ್ವಜವನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿಯವರಿಗೆ ಧ್ವಜ ಹಸ್ತಾಂತರದ ಮೂಲಕ ಚಾಲನೆ ನೀಡಿದರು.

ಸಹಕಾರಿ ಕ್ಷೇತ್ರದಲ್ಲಿಯೇ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸಹಕಾರಿ ಲಾಂಛನವನ್ನು ಉದ್ಯಮಿ ಪಿ.ಪುರುಷೋತ್ತಮ ಶೆಟ್ಟಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ, ಅಲೆವೂರು ಹರೀಶ್ ಕಿಣಿ, ರವಿರಾಜ್ ಹೆಗ್ಡೆ ಕೊಡವೂರು, ಚಂದ್ರಹಾಸ್ ಶೆಟ್ಟಿ ಹಾಗೂ ಸಹಕಾರಿಗಳು ಉಪಸ್ಥಿತರಿದ್ದರು.