ಸಹಕಾರಿ ರತ್ನ ಪ್ರಶಸ್ತಿ ವಿಜೇತ ವಿಠ್ಠಲಸಿಂಗ್ ಅವರಿಗೆ ಸನ್ಮಾನ

ತಾಳಿಕೋಟೆ:ನ.23: ಕರ್ನಾಟಕ ಸರ್ಕಾರದ ವತಿಯಿಂದ ಕೊಡಮಾಡಲಾದ ಸಹಕಾರಿ ರತ್ನ ಪ್ರಶಸ್ತಿ ಪಡೆದ ಪಟ್ಟಣದ ದಿ.ತಾಳಿಕೋಟೆ ಸಹಕಾರಿ ಬ್ಯಾಂಕ್ ನಿ,ದ ಅಧ್ಯಕ್ಷ ವಿಠ್ಠಲಸಿಂಗ್ ಹಜೇರಿ ಅವರಿಗೆ ಗುಂಡಕನಾಳ ಬೃಹನ್ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಮಯದಲ್ಲಿ ಮಾತನಾಡಿದ ಶ್ರೀಗಳು ಸತತ 40 ವರ್ಷಗಳಿಂದಲೂ ಸಹಕಾರಿ ಬ್ಯಾಂಕಿನ ಬೆಳವಣಿಗೆಗೆ ಮುಂದಾಗಿದ್ದ ಹಿರಿಯ ಜೀವಿ ವಿಠ್ಠಲಸಿಂಗ್ ಹಜೇರಿ ಅವರಿಗೆ ಸರ್ಕಾರವು ಗುರುತಿಸಿ ಸಹಕಾರಿ ರತ್ನ ಪ್ರಶಸ್ತಿ ನೀಡಿರುವದು ಸಂತಸ ತಂದಿದೆ ಅಲ್ಲದೇ ಇತರೇ ಸದಸ್ಯರಿಗೆ ಮಾದರಿಯಾಗುವಂತಹಾಗಿದೆ ಮುಂದಿನ ದಿನಗಳಲ್ಲಿ ಸಹಕಾರಿ ಬ್ಯಾಂಕು ಇನ್ನಷ್ಟು ಉನ್ನತಮಟ್ಟಕ್ಕೆ ಬೆಳೆದು ರಾಜ್ಯಾಧ್ಯಂತ ಶಾಖೆಗಳನ್ನು ಹೊಂದಲಿ ಎಂದು ಆಶಿಸಿದರು.

ಈ ಸಮಯದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕಾಶಿನಾಥ ಸಜ್ಜನ, ನಿರ್ದೇಶಕರುಗಳಾದ ಆಯ್.ಬಿ.ಬಿಳೇಭಾವಿ, ಎಚ್.ಬಿ.ಬಾಗೇವಾಡಿ, ಎಂ.ಎಸ್.ಸರಶೆಟ್ಟಿ, ಚಿಂತಪ್ಪಗೌಡ ಯಾಳಗಿ, ಡಿ.ಎಸ್.ಹೆಬಸೂರ, ಎನ್.ಆಯ್.ಚಿನಗುಡಿ, ಎಸ್.ಸಿ.ಪಾಟೀಲ, ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಬಿ.ಕೆ.ಮಣೂರ ಹಾಗೂ ಹಿಂದೂ ಮಹಾ ಗಣಪತಿ ಮಹಾಮಂಡಳಿಯ ಸದಸ್ಯರು ಇದ್ದರು.