ಸಹಕಾರಿ ಬ್ಯಾಂಕ್‌ಗಳಿಗೆ ೪೪ ಲಕ್ಷ ದಂಡ

ನವದೆಹಲಿ, ಏ.೨೫- ತಮಿಳುನಾಡು ಸ್ಟೇಟ್ ಅಪೆಕ್ಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ ೧೬ ಲಕ್ಷ ರೂಪಾಯಿ ದಂಡ ಸೇರಿದಂತೆ ದೇಶದ ನಾಲ್ಕು ಸಹಕಾರಿ ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ಒಟ್ಟು ೪೪ ಲಕ್ಷ ರೂಪಾಯಿ ದಂಡ ವಿಧಿಸಿದೆ.
ನಿಗದಿತ ಅವಧಿಯೊಳಗೆ ಅರ್ಹ ಮೊತ್ತವನ್ನು ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸಲು ವಿಫಲವಾದ ಕಾರಣ ತಮಿಳುನಾಡು ರಾಜ್ಯ ಅಪೆಕ್ಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ ದಂಡವನ್ನು ವಿಧಿಸಲಾಗಿದೆ. ನಿಗದಿತ ಸಮಯದೊಳಗೆ ವಂಚನೆಯನ್ನು ನಬಾರ್ಡ್‌ಗೆ ವರದಿ ಮಾಡಲು ವಿಫಲ ಮತ್ತು ವಿಳಂಬವಾಗಿದೆ ಎಂದು ವರದಿ ಮಾಡಿದೆ.
ಅದೇ ರೀತಿ, ಠೇವಣಿಗಳ ಮೇಲಿನ ಬಡ್ಡಿ ದರದ ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ ಪುಣೆಯ ಜನತಾ ಸಹಕಾರಿ ಬ್ಯಾಂಕ್‌ಗೆ ೧೩ ಕೋಟಿ ರೂ. ದಂಡವನ್ನು ವಿಧಿಸಲಾಗಿದೆ.
ಅಲ್ಲದೆ, ನಿಗದಿತ ಅವಧಿಯಲ್ಲಿ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಅರ್ಹ ಮೊತ್ತವನ್ನು ವರ್ಗಾಯಿಸಲು ವಿಫಲವಾದ ಕಾರಣ ಬಾಂಬೆ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್‌ಗೆ ೧೩ ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಕೆಲವು ನಿಯಮಗಳ ಉಲ್ಲಂಘನೆಗಾಗಿ ರಾಜಸ್ಥಾನದ ಬರನ್ ನಗ್ರಿಕ್ ಸಹಕಾರಿ ಬ್ಯಾಂಕ್‌ಗೆ ೨ ಲಕ್ಷ ರೂಪಾಯಿಗಳ ವಿತ್ತೀಯ ದಂಡವನ್ನು ವಿಧಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.