ಸಹಕಾರಿ ಚಳುವಳಿಯ ಮೂಲಕ ಆತ್ಮನಿರ್ಭರ ಭಾರತ ಸಾಧ್ಯ :ಜ್ಯಾಂತೀಕರ

ಬೀದರ:ನ.21:ಸಹಕಾರಿಯು ನಮ್ಮ ಮೂಲ ಮಂತ್ರ ಭಾರತದಲ್ಲಿ ಸಹಕಾರ ಚಳುವಳಿಗೆ ತನ್ನದೆಯಾದ ಇತಿಹಾಸವಿದೆ ಈ ಚಳುವಳಿಯನ್ನು ಮನೆ ಮನಗಳಲ್ಲಿ ಮೂಡಿಸಿ ಆತ್ಮನಿರ್ಭರ ಭಾರತದ ಕನಸು ಸಕಾರಗೊಳಿಸಿ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಗುರುನಾಥ ಜ್ಯಾಂತಿಕರ ಕರೆ ನೀಡಿದರು. ನಗರದ ಲೋಕಮುದ್ರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿ., ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಪ್ರಾಂತ ಕಲಬುರಗಿ ಹಾಗೂ ಬೀದರ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ., ಬೀದರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ-2020ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಕರೋನಾ ಸಂದರ್ಬದಲ್ಲಿ ಸಹಕಾರಿಗಳು ಕಷ್ಟದ ದಿನಗಳು ಅನುಭವಿಸಿದವು ಅದರಲ್ಲು ಯಾರು ಎದೆಗುಂದದೆ ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಮಾದರಿಯಾದವು ಎಂದರು. ಈ ವರ್ಷದ ಮುಖ್ಯ ಧ್ಯಯವೆಂದರೆ ಕರೋನಾ-ಸೋಂಕು-ಆತ್ಮನಿರ್ಭರ ಭಾರತ-ಸಹಕಾರ ಸಂಸ್ಥೆಗಳು ಎಂಬ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರು ಆತ್ಮನಿರ್ಭರರಾಗಿ ಉತ್ತಮ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಸಂಪನ್ಮೂ ವ್ಯಕ್ತಿಗಳಾಗಿ ಆಗಮಿಸಿದ ಉಪನ್ಯಾಸಕಾರದ ರವಿ ಭಾತಂಬ್ರೆ ಇವರು ಸಹಕಾರ ಕ್ಷೇತ್ರಕ್ಕೆ ಯುವಜನ,ಮಹಿಳೆಯು ದುರ್ಬಲ ವರ್ಗದವರು ಸೇರಿದಾಗ ಮಾತ್ರ ಚಳುವಳಿ ಯಶಸ್ವಿಯಾಗಲು ಸಾಧ್ಯವೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷರಾದ ಸಂಜೀವಕುಮಾರ ಪಾಟೀಲ್ ವಹಿಸಿಕೊಂಡಿದರು. ಸಹಕಾರ ದ್ವಜಾರೊಹಣವನ್ನು ನಿರ್ದೇಶಕರಾದ ಶ್ರೀಕಾಂತ ಸ್ವಾಮಿ ಸೋಲಪೂರ ನೇರವೆರಿಸಿದರು. ಸಹಕಾರ ಸಪ್ತಾಹ-2020 ಕುರಿತು ಪ್ರಾಸ್ತವಿಕ ನುಡಿಯನ್ನು ಪ್ರಾಂತೀಯ ವ್ಯವಸ್ಥಾಪಕರಾದ ರಾಜಶೇಖರ ಹೂಗಾರ ನಡೆಸಿಕೊಟ್ಟರು. ವೇದಿಕೆಯ ಮೇಲೆ ನಿರ್ದೇಶಕರಾದ ಶ್ರೀಮತಿ ಮಯಾದೇವಿ ಸಿಂದನಕೇರಾ, ರಾಜಶೇಖರ ನಾಗಮುರ್ತಿ, ಲೋಕಮುದ್ರ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಸುಭಾಷ ಶೇಡೋಳೆ ವಿಜಯಕುಮಾರ ಸಿಂದೆ, ಸಚಿನ ಬಿರಾದಾರ, ಬಸವರಾಜ ಹುಡಗೆ, ಸತೀಷ ಭಾತಂಬ್ರಾ, ಸಂಯುಕ್ತ ಸಹಕಾರಿಯ ಅಧಿಕಾರಿಗಳಾದ ಓಂಕಾರ ಧರಣೆ, ವೀರಶೆಟ್ಟಿ, ರವಿ, ಮುಖ್ಯ ಕಾರ್ಯನಿರ್ವಾಹಕರಾದ ಅಮೃತ ಹೋಸಮನಿ, ಸಾವಿತ್ರಿ ಮುಂತಾದವರು ಉಪಸ್ಥಿತರಿದ್ದರು. ಶರಣೆ ಮಲ್ಲಮ್ಮ ಇವರು ಸ್ವಾಗತಿಸಿದರು ವೀರಶಟ್ಟಿ ಕಾಮಣ್ಣಾ ನೀರೂಪಿಸಿದರು ಸುಭಾಷ ಶೇಡೊಳೆ ವಂದಿಸಿದರು. ಭಾಲ್ಕಿ ತಾಲ್ಲೂಕಿನ 50ಕ್ಕೂ ಹೆಚ್ಚು ಸಹಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.