ಸಹಕಾರಿ ಕ್ಷೇತ್ರದಿಂದಲೇ ದೇಶದ ಅಭಿವೃದ್ದಿ:ಯಾಳಗಿ

ತಾಳಿಕೋಟೆ: ನ.18: ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ತತ್ವದಡಿ ಸಾಗಿರುವ ಸಹಕಾರಿ ಕ್ಷೇತ್ರದಿಂದ ದೇಶದ ಆರ್ಥಿಕ ಅಭಿವೃದ್ದಿ ಹೊಂದುತ್ತಾ ಸಾಗಿದೆ ದೇಶದ ಆರ್ಥಿಕತೆ ದ್ವಿಗುಣಗೊಳ್ಳುವಲ್ಲಿ ಈ ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬಿ.ಎಸ್.ಪಾಟೀಲ(ಯಾಳಗಿ) ಅವರು ಹೇಳಿದರು.

ಗುರುವಾರರಂದು ಪಟ್ಟಣದ ಅಡತ್ ಮರ್ಚಂಟ್ ಅಸೋಸಿಯೇಷನ್ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ,ಬೆಂಗಳೂರ, ವಿಜಯಪುರ ಜಿಲ್ಲಾ ಸಹಕಾರ ಯೂನಿಯನ್ ನಿ, ವಿಜಯಪುರ ಸಹಕಾರ ಇಲಾಖೆ ಹಾಗೂ ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್ ನಿ, ತಾಳಿಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ 69ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಅವಿಷ್ಕಾರ ಪೋಷಣೆ, ಸ್ಟಾರ್ಟ್‍ಅಪ್‍ಗಳಿಗೆ ಉತ್ತೇಜನ ಮತ್ತು ತಂತ್ರಜ್ಞಾನದ ಉನ್ನತಿಕರಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಕುರಿತು ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಜವಾರಲಾಲ್ ನೇಹರು ಅವರ ಜನ್ಮ ದಿನಾಚರಣೆ ಅಂಗವಾಗಿ ನವ್ಹೇಂಬರ್ 14 ರಿಂದ 20 ರವರೆಗೆ ಈ ಸಹಕಾರಿ ಸಪ್ತಾಹವನ್ನು ಆಚರಿಸಲಾಗುತ್ತದೆ ಕಣಗಿನಾಳ ಸಿದ್ದನಗೌಡರು ಜಾರಿಗೆ ತಂದ ಸಹಕಾರಿ ಸಪ್ತಾಹದ ಚಳುವಳಿಯು ನಿರಂತರವಾಗಿ ನಡೆದುಕೊಂಡು ಬಂದಿದೆ ಸಹಕಾರಿ ಕ್ಷೇತ್ರದಲ್ಲಿರುವ ದುಡ್ಡು ಜನರಿಂದ ಜನರಿಗಾಗಿ ಎಂಬುದಾಗಿದೆ ಶ್ರೀಮಂತರು ಕೂಡಿಟ್ಟ ಹಣ ಬಡವರಿಗೆ ಅನುಕೂಲವಾಗುವದರ ಜೊತೆಗೆ ಜನರೊಂದಿಗೆ ವಿಸ್ವಾಸಾರ್ಹತೆಯನ್ನು ಬೆಳೆಸಿಕೊಂಡಿದೆ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಎಂಬುದು ಬರಬಾರದು ನಿಸ್ವಾರ್ಥ ಸೇವೆಯೊಂದಿಗೆ ಬಡವರಿಗೆ ಉದ್ಯೋಗ ಒದಗಿಸುವಲ್ಲಿ ಪ್ರಮುಖ ಪಾತ್ರ ಸಹಕಾರಿ ಕ್ಷೇತ್ರ ವಹಿಸಿದೆ ಎಂದರು.

   ಇನ್ನೋರ್ವ ಅತಿಥಿ ವಿಜಯಪುರ ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್.ಜಿ.ಕುಂಭಾರ ಅವರು ಮಾತನಾಡಿ ದೇಶದಲ್ಲಿ ಹೊಸ ಹೊಸ ಉದ್ಯಮಗಳು ಹುಟ್ಟುಕೊಳ್ಳುವದರ ಜೊತೆಗೆ ಕೋಟ್ಯಾಂತರ ಜನರಿಗೆ ಉದ್ಯೋಗ ಒದಗಿಸುವಲ್ಲಿ ಪ್ರಮುಖ ಪಾತ್ರ ಸಹಕಾರಿಯು ವಹಿಸಿದೆ ಇಂದಿನ ತಂತ್ರಜ್ಞಾನದ ಯುಗದ ಬೆಳವಣಿಗೆಗೆ ಸಹಕಾರಿ ಕ್ಷೇತ್ರ ಅನನ್ಯ ಕೊಡುಗೆ ಇದೆ ಸರ್ಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳಬೇಕೆಂದರೆ ಅವರು ಕೇಳುವ ಖಾಗದ ಪತ್ರಗಳು ಹೊಂದಿಸುವದೇ ಅಸಾದ್ಯವೆಂಬುದಾಗಿದೆ ಹಾಗಂತ ಸಹಕಾರಿ ಬ್ಯಾಂಕುಗಳು ದಾಖಲಾತಿಗಳಿಲ್ಲದೇ ಸಾಲ ನೀಡುವದಿಲ್ಲಾ ವ್ಯಕ್ತಿಯ ಸಾಲದ ಹಿಂದಿನ ಉದ್ದೇಶವನ್ನು ಅರೀತುಕೊಂಡು ಸಾಲ ನೀಡುತ್ತವೆ ಪಡೆದ ಸಾಲ ಮರುಪಾವತಿ ಮಾಡುವ ಸಾಮಥ್ರ್ಯ ಆ ವ್ಯಕ್ತಿಯ ಬಳಿ ಇದೆಯೋ ಎಂಬುದನ್ನು ಪರಿಶೀಲಿಸುತ್ತದೆ ಸಾಲ ಪಡೆದ ವ್ಯಕ್ತಿ ಆರ್ಥಿಕವಾಗಿ ಸಭಲರಾಗಬೇಕೆಂಬ ಉದ್ದೇಶ ಸಹಕಾರಿ ಕ್ಷೇತ್ರದ್ದಾಗಿದೆ ನವ್ಹೇಂಬರ್ 14 ರಿಂದ 20 ರವರೆಗೆ ನಡೆಯಲಿರುವ ಈ ಸಹಕಾರಿ ಸಪ್ತಾಹದಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆ ಮತ್ತು ಜನರ ಆರ್ಥಿಕತೆ ಸಬಲಿಕರಣದ ಬಗ್ಗೆ ಚರ್ಚೆ ನಡೆಯುತ್ತದೆ ಎಂದರು.

ವಿಜಯಪುರ ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕರಾದ ವ್ಹಿ.ಜಿ.ಜೋಶಿ, ಹಾಗೂ ನಾಲತವಾಡ ಶರಣ ವೀರೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎಸ್.ಪಾಟೀಲ ಅವರು ಮಾತನಾಡಿ ಶತ ಶತಮಾನಗಳಿಂದ ಬೆಳೆದು ಬಂದಿರುವ ಸಹಕಾರಿ ಕ್ಷೇತ್ರವು ದೇಶಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದೆ ಸಹಕಾರಿ ಕ್ಷೇತ್ರದಿಂದ ಉದ್ಯಮಸೀಲತೆಗಳು ದೇಶದಲ್ಲಿ ಸಾಕಷ್ಟು ಬೆಳೆದು ನಿಂತಿದೆ ಶ್ರೀಮಂತ ಯಾವಾಗಲೂ ಸಾಹುಕಾರನಾಗಿದ್ದರೂ ಪರವಾಗಿಲ್ಲಾ ಬಡವನು ಬಡವನಾಗಿ ಇರಬಾರದು ಆತನನ್ನು ಆರ್ಥಿಕವಾಗಿ ಮೇಲಕ್ಕೆ ತರಲು ಸರಳಿಕರಣದ ಸಾಲಗಳ ಮೂಲಕ ಪ್ರಯತ್ನಿಸಿ ಆತನನ್ನು ಆರ್ಥಿಕವಾಗಿ ಮೆಲೆತ್ತುವಂತಹ ಕಾರ್ಯವಾಗುತ್ತಾ ಬಂದಿದೆ ಇದರಿಂದ ದೇಶದಲ್ಲಿ ಜನರು ಸ್ವಾವಲಂಬನೆ ಬಧುಕು ನಡೆಸಲು ಸಹಕಾರಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಂ.ಎಸ್.ಪಾಟೀಲ(ಕೋರಳ್ಳಿ) ಅವರು ಮಾತನಾಡಿದರು.

ಕಾರ್ಯಕ್ರಮವನ್ನು ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್ ನಿ,ದ ಅಧ್ಯಕ್ಷ ವಿಠ್ಠಲಸಿಂಗ್ ಹಜೇರಿ ಅವರು ಉದ್ಘಾಟಿಸಿದರು.

ಇದೇ ಸಮಯದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಸಹಕಾರಿ ರತ್ನ ಪ್ರಶಸ್ತಿ ಪಡೆದ ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್ ನಿ,ದ ಅಧ್ಯಕ್ಷ ವಿಠ್ಠಲಸಿಂಗ್ ಹಜೇರಿ ಅವರಿಗೆ ಜಿಲ್ಲಾ ಸಹಕಾರಿ ಯೂನಿಯನ್, ನಾಲತವಾಡ ಶರಣ ವಿರೇಶ್ವರ ಬ್ಯಾಂಕ್, ತಾಳಿಕೋಟೆ ಸದಾನಂದ ಸೌಹಾರ್ದ ಬ್ಯಾಂಕ್, ಶ್ರೀ ಶಾರದಾದೇವಿ ಮಹಿಳಾ ಕೋ-ಆಪ್ ಸೋಸಾಯಿಟಿ, ಶ್ರೀ ಬಸವೇಶ್ವರ ಸಹಕಾರಿ ಪತ್ತಿನ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶಶಿಧರ ಬೆಣ್ಣೂರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಸಹಕಾರಿ ಅಭಿವೃದ್ದಿ ಅಧಿಕಾರಿ ವಿಜಯಕುಮಾರ ಉತ್ನಾಳ, ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್ ನಿ,ದ ಉಪಾಧ್ಯಕ್ಷ ಕೆ.ಸಿ.ಸಜ್ಜನ, ನಿರ್ದೇಶಕರುಗಳಾದ ಆಯ್.ಬಿ.ಬಿಳೇಭಾವಿ, ಎಚ್.ಬಿ.ಬಾಗೇವಾಡಿ, ಎಂ.ಎಸ್.ಸರಶೆಟ್ಟಿ, ಡಿ.ಎಸ್.ಹೆಬಸೂರ, ಸಿ.ಎಸ್.ಯಾಳಗಿ, ಎನ್.ಆಯ್.ಚಿನಗುಡಿ, ಎಸ್.ಸಿ.ಪಾಟೀಲ, ಶ್ರೀಮತಿ ಆರ್.ಬಿ.ಕಾರ್ಜೋಳ, ಶ್ರೀಮತಿ ಆರ್.ಎಸ್.ಹಿರೇಮಠ, ಆರ್.ಬಿ.ಕಟ್ಟಿಮನಿ, ಎಸ್.ವಾಯ್.ಬರದೇನಾಳ, ಮಿಣಜಗಿ ಶಾಖೆಯ ಅಧ್ಯಕ್ಷ ಜಿ.ಕೆ.ಬಿರಾದಾರ, ಸದಸ್ಯ ಡಿ.ಕೆ.ಪಾಟೀಲ, ಮೊದಲಾದವರು ಇದ್ದರು.

ಶ್ರೀಮತಿ ಟಿ.ಬಿ.ಸಜ್ಜನ, ಶ್ರೀಮತಿ ಎಸ್.ಬಿ.ದೇಸಾಯಿ ಪ್ರಾರ್ಥಿಸಿದರು. ಪ್ರದಾನ ವ್ಯವಸ್ಥಾಪಕರಾದ ಶ್ರೀಮತಿ ಬಿ.ಕೆ.ಮಣೂರ ಸ್ವಾಗತಿಸಿದರು. ಶ್ರೀಮತಿ ಸವಿತಾ ಬಿಸನಾಳ ನಿರೂಪಿಸಿ ವಂದಿಸಿದರು.