ಸಹಕಾರಿ ಕ್ಷೇತ್ರದಲ್ಲಿ ಗ್ರಾಹಕ ಸೇವೆಯೇ ಪ್ರಧಾನ

ಬೀದರ.ಮೇ 23: ಜನರೇಸಂಘಟಿತರಾಗಿ ತಮಗೆ ಬೇಕಾದ ವ್ಯವಸ್ಥೆಗಳನ್ನು
ಸೇವೆಗಳನ್ನು ತಾವೇ ರೂಪಿಸಿಕೊಳ್ಳುವದೇ ಸಹಕಾರದ ಧ್ಯೇಯವಾಗಿದೆ. ಸಹಕಾರೀ ಕ್ಷೇತ್ರದಲ್ಲಿ ಗ್ರಾಹಕ ಸೇವೆಯೇ ಪ್ರಧಾನವಾಗಿದೆ. ಸಹಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವವರು ಅಧಿಕಾರಿಗಳಾಗಿದ್ದರೂ ಸೇವಕರಂತೆ ಕಾರ್ಯನಿರ್ವಹಿಸಬೇಕು ಎಂದುಡಿಸಿಸಿ ಬ್ಯಾಂಕಿನ ನಿರ್ದೇಶಕ ಮೊಹಮ್ಮದ್ ಸಲೀಂ ನುಡಿದರು.
ಡಾ.ಗುರುಪಾದಪ್ಪಾ ನಾಗಮಾರಪಳ್ಳಿ ಸೌಹಾರ್ದ ತರಬೇತಿಸಂಸ್ಥೆಯಲ್ಲಿ ಧಾರವಾಡ ಬಳ್ಳಾರಿ, ರಾಯಚೂರುಮತ್ತುಬಾಗಲಕೋಟೆ ಜಿಲ್ಲೆಗಳ ಪ್ಯಾಕ್ಸಗಳ ಸಿಬ್ಬಂದಿಗಳಿಗೆ ನಬಾರ್ಡವತಿಯಿಂದ ನಡೆದ ಲೆಕ್ಕಪತ್ರ ನಿರ್ವಹಣೆ ತರಬೇತಿಯ ಉದ್ಘಾಟನಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೇವೆಯೊಂದಿಗೆ ಲಾಭಸಿದ್ದಾಂತದಡಿಯಲ್ಲಿ ಸೇವೆ ನೀಡುವ ಸಹಕಾರಿ ಸಂಸ್ಥೆಗಳು ರೈತಪರಕಾಳಜಿಯೊಂದಿಗೆ ಸೇವೆ ನೀಡುವಲ್ಲಿ ಮೊದಲಿಗರಾಗಿರಬೇಕು. ಬದಲಾದಬ್ಯಾಂಕಿಂಗ ಪದ್ದತಿಗಳನ್ನುಅಳವಡಿಸಿಕೊಳ್ಳಬೇಕು. ಸಿಬ್ಬಂದಿಗಳುತಮ್ಮ ಮನೋಭಾವನೆಗಳನ್ನುಬದಲಾಯಿಸಿಕೊಳ್ಳಬೇಕು.ತಂತ್ರಜ್ಞಾನವನ್ನು ಕಲಿಯಬೇಕು.
ಉತ್ತಮವ್ಯವಸ್ಥೆಯೊಂದಿಗೆ ಆಧುನಿಕ ಸೇವೆ ನೀಡಲು ಸಿಬ್ಬಂದಿಗಳಿಗೆ
ಸಂಘಗಳ ಅಭಿವೃದ್ದಿಗೆಉತ್ತಮ ನಾಯಕತ್ವ ಬಹಳ ಮುಖ್ಯವಾಗಿದೆ. ಸಂಘಗಳಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ
ಅನುಭವ ಸಿಗುತ್ತದೆ. ಬೀದರ್ ಡಿ.ಸಿ.ಸಿ ಬ್ಯಾಂಕ್ ಫಸಲ ಬೀಮಾ ಮತ್ತು
ಸ್ವ ಸಹಾಯ ಗುಂಪುಗಳ ಕಾರ್ಯಕ್ರಮ ಜಾರಿಯಲ್ಲಿ ದೇಶಕ್ಕೇ
ಮಾದರಿಯಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಅತಿಥಿಗಳಾಗಿದ್ದ ಎಂಸಿಡಿ ವಿಭಾಗದ ಉಪ ಪ್ರಧಾನ
ವ್ಯವಸ್ಥಾಪಕ ಬಸವರಾಜ ಕಲ್ಯಾಣ ರವರು ಮಾತನಾಡಿ ತರಬೇತಿಗಳು
ಹೊಸ ಕಾರ್ಯವಿಧಾನಗಳನ್ನು ಪರಿಚಯಿಸುವಲ್ಲಿ ಶಿಕ್ಷಣವನ್ನು
ನೀಡುತ್ತವೆ ಎಂದರು. ಡಿಸಿಸಿ ಬ್ಯಾಂಕಿನ ಕಿರು ಹಣಕಾಸು ವಿಭಾಗದ ನಾಗೇಶಉಪಸ್ಥಿತರಿದ್ದರು.ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ಸ್ವಾಗತಿಸಿದರು. ಎಸ ಜಿ ಪಾಟೀಲವಂದಿಸಿದರು ಅನಿಲ ಪಿ ಕಾರ್ಯಕ್ರಮ ನಿರ್ವಹಿಸಿದರು. ಅಪ್ಪಣ್ಣಾಸಹಕರಿಸಿದರು.