ಸಹಕಾರಿಬ್ಯಾಂಕ್ ಖಾತೆಗಳ ಮೇಲೂ ನಿಗಾ ಇಡಿ:ಜಿಲ್ಲಾಧಿಕಾರಿ

ಕಲಬುರಗಿ,ಏ.1: ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲೆಯ ಸಹಕಾರಿ ಬ್ಯಾಂಕ್ ಮೂಲಕ ನಡೆಯುವ ಆರ್ಥಿಕ ವಹಿವಾಟುಗಳ ಮೇಲೆ ನಿಗಾ ಇಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಇಂದು ತಮ್ಮ ಕಚೇರಿಯಲ್ಲಿ ಸಹಕಾರ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಸಂಶಯಾಸ್ಪದ ಯಾವುದೇ ವಹಿವಾಟು ಕಂಡುಬಂದಲ್ಲಿ ಕೂಡಲೆ ಗಮನಕ್ಕೆ ತರಬೇಕು ಎಂದರು.
50 ಸಾವಿರ ರೂ. ಮೇಲ್ಪಟ್ಟು, ಒಂದೇ ಖಾತೆಯಿಂದ ಹಲವರ ಖಾತೆಗಳಿಗೆ ಆರ್.ಟಿ.ಜಿ.ಸ್ ಮೂಲಕ ಹಣ ವರ್ಗಾವಣೆ, 1 ಲಕ್ಷ ರೂ. ಮೇಲ್ಪಟ್ಟ ಹಣ ಜಮೆ ಹಾಗೂ ರಾಜಕೀಯ ಪಕ್ಷಗಳ ಖಾತೆಯ ಪ್ರತಿ ವಿತ್ ಡ್ರಾಲ್ ಮತ್ತು ಡಿಪೆÇೀಸಿಟ್ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಎಂ.ಸಿ.ಸಿ. ನೋಡಲ್ ಅಧಿಕಾರಿ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.