ಸಸ್ಲೆನ್ಸ್ ಥ್ರಿಲ್ಲರ್ ಚೇಸ್ ಲಿರಿಕಲ್ ಹಾಡು

ಸಸ್ಪೆನ್ಸ್ ಥ್ರಿಲ್ಲರ್ “ಚೇಸ್ ” ಚಿತ್ರದ ‘ಮನದ ಹೊಸಿಲಾ’ ಎಂಬ ಮೊದಲ ಲಿರಿಕಲ್ ವೀಡಿಯೋ ಹಾಡನ್ನು ಬಿಡುಗಡೆ ಮಾಡಿದ್ದು ಅಪಾರ ಮೆಚ್ಚುಗೆ ಪಡೆದಿದೆ.

ಗಾಯಕ ವಿಜಯ ಪ್ರಕಾಶ್ ಹಾಗೂ ಮಲಯಾಳಂನ ಮಕ್ಬೂಲ್ ಮನ್ಸೂರ್ ಮೊಹಮ್ಮದ್ ಹಾಡಿರುವ ಹಾಡಿಗೆ ಡಾ.ಉಮೇಶ್ ಪಿಲಿಕುಡೇಲು ಸಾಹಿತ್ಯ ಮತ್ತು ಕಾರ್ತಿಕ್ ಆಚಾರ್ಯ ಸಂಗೀತವಿದೆ. ಹಾಡಿಗೆ ಚಿತ್ರರಂಗದ ಪ್ರಮುಖರಾದ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ದಿಯಾ ಖ್ಯಾತಿಯ ನಟಿ ಖುಷಿ, ವಿ. ಮನೋಹರ್, ಗಿರಿಧರ್ ದಿವಾನ್, ಅನುರಾಧ್ ಭಟ್ ಅನೇಕರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ವಿಲೋಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರವನ್ನು 52 ದಿನಗಳ‌ ಕಾಲ ಮಂಗಳೂರು, ಬೆಂಗಳೂರು, ಉಡುಪಿ, ಕೊಚ್ಚಿ, ಹಿಮಾಚಲ ಪ್ರದೇಶದ ಸುಂದರ ಲೋಕೇಷನ್ ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ಅದರಲ್ಲಿ ಒಂದು ಹಾಡಿನ‌ ಲಿಕರಲ್‌‌ ವಿಡಿಯೋ ಬಿಡಗಡೆ ಮಾಡಲಾಗಿದೆ. ಚಿತ್ರಕ್ಕೆ ಗೀತಾ ಗುರಪ್ಪ ಡಾಲ್ಬಿ ಅಟ್ಮಾಸ್ಪಿಯರ್ ಕೆಲಸ ಮಾಡಿದ್ದಾರೆ. ಕನ್ನಡದವೇ ಚೆನ್ನೈನಲ್ಲಿ ಇದ್ದಾರೆ ಎಂದರು. ಚಿತ್ರದ ಪಾತ್ರಗಳು ಒಂದು ಗುರಿ ಇಟ್ಟುಕೊಂಡು ಚೇಸ್ ಮಾಡ್ತಾರೆ. ರಾತ್ರಿಯಲ್ಲಿ ನಡೆಯುವ ಘಟನೆ ಯಾವುದನ್ನೂ‌‌ ನಿರ್ಲಕ್ಷ್ಯ ಮಾಡಬಾರದು ಎನ್ನುವುದನ್ನು ತೋರಿಸುವ‌ ಪ್ರಯತ್ನ ಮಾಡಿದ್ದೇವೆ. ರಾಧಿಕಾ ನಾರಾಯಣ್ ಅವರ ಅತ್ಯುತ್ತಮ ಚಿತ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದರು.

ಚಿತ್ರದ ಬಗ್ಗೆ ಮಾಹಿತಿ‌ ಹಂಚಿಕೊಂಡ ವಿಲೋಕ್ ಶೆ್ಟಟ್ಟಿ, ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಬೇಕು ಅಂದುಕೊಂಡಿದ್ದೆವು.ಕೊರೋನಾ ಸೋಂಕಿನಿಂದ ಲಾಕ್ ಡೌನ್ ‌ಸೇರಿದಂತೆ ಇತರೆ ಕಾರಣದಿಂದ ಮುಂದೂಡಲಾಗಿದೆ.ಸದ್ಯ ಚಿತ್ರೀಕರಣ ಪೂರ್ಣಗೊಂಡಿದೆ.ಸೆನ್ಸಾರ್ ಗೆ ಹೋಗುವುದಷ್ಟೇ ಬಾಕಿ ಇದೆ ಎಂದರು.

ಚಿತ್ರದಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಶ್ವೇತಾ ಸಂಜೀವುಲು, ಸುಶಾಂತ್ ಪೂಜಾರಿ, ಅರವಿಂದ್ ರಾವ್ , ರಾಜೇಶ್ ನಟರಂಗ ಮುಖ್ಯ ಭೂಮಿಕೆಯಲ್ಲಿದ್ದಾರೆ.

ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್, ರೆಹಮಾನ್ ಹಾಸನ್, ವೀಣಾ ಸುಂದರ್, ಸುಂದರ್, ಪ್ರಿಯಾ ಪಟಮರ್ಧನ್, ನಾಗಾರ್ಜುನ ಬಿ ರಾಜಶೇಖರ್, ಉಷಾ ಭಂಡಾರಿ, ಡಾ.ಕಿಂಗ್ ಮೋಹನ್ ಹೀಗೆ ಕಲಾವಿದರ ದೊಡ್ಡ ‘ಚೇಸ್’ ತಾರಾಗಣದಲ್ಲಿದ್ದಾರೆ.

ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಜೊತೆಯಾಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶಿವ್ ಶೆಟ್ಟಿ‌ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.