ಸಸ್ಯ ಕಾಶಿಯಲ್ಲೀಗ ಹಸೀರೆ ಹಸಿರು


ಲಕ್ಷ್ಮೇಶ್ವರ,ಜೂ.5: ಸಮೀಪದ ಶೆಟ್ಟಿ ಕೇರಿಯ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯ ಕಾಶಿಯಲ್ಲಿ ಇದೀಗ ಹಸಿರೇ ಹಸಿರು ಎಲ್ಲಿ ನೋಡಿದಲ್ಲಿ ಬೆಳೆದು ನಿಂತ ನಳ ನಳಿಸುವ ಸಸ್ಯಗಳು ಕೈಬಿಸಿ ಕರೆಯುತ್ತಿವೆ.
ಸಾಮಾಜಿಕ ಅರಣ್ಯ ಇಲಾಖೆಯವರು ಪ್ರಸಕ್ತ ಮಳೆಗಾಲದಲ್ಲಿ ರೈತರು ಮತ್ತು ಸಾರ್ವಜನಿಕರಿಗಾಗಿ ರಿಯಾಯಿತಿಯ ದರದಲ್ಲಿ ಸಸಿಗಳನ್ನು ಮಾರಾಟಕ್ಕೆ ಸಿದ್ಧಪಡಿಸಿದ್ದು ಒಂದಲ್ಲ ಎರಡಲ್ಲ ಅನೇಕ ರೀತಿಯ ಸಸ್ಯಗಳು ಇಲ್ಲಿ ಬೆಳೆದು ನಿಂತಿದ್ದು ಇದೀಗ ಸಾಮಾಜಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಕ್ಕಳಂತೆ ಪೆÇೀಷಿಶಿ ಬೆಳೆಸಿರುವ ಸಸಿಗಳು ಇನ್ನೇನು ತಾಯಿಗೆ ಸೇರಲಿವೆ.
ಶೆಟ್ಟಿಕೆರೆಯ ಸಸ್ಯ ಕಾಶಿಯಲ್ಲಿ ಹುಣಸೆ ಕಾಡುನಲ್ಲಿ ಹೊಂಗೆ ಶಿವನಿ ನುಗ್ಗಿ ಕಾಡು ಬದಾಮಿ ಬೇವು ಅಶೋಕ ಟ್ರೀ ಶ್ರೀಗಂಧ ಹುಣಸೆ ಹೊಂಗೆ ಸಿಲ್ವರ್ ವೋಕ್ ಹೆಬ್ಬೇವು ಮಹಾಗನಿ ಸೇರಿದಂತೆ ಅನೇಕ ಸಸ್ಯಗಳನ್ನು ಬೆಳೆಸಲಾಗಿದೆ.
ಶೆಟ್ಟಿಕೆರೆಯ ಸಾಮಾಜಿಕ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ 6×9 ಸೈಜಿನ ಬ್ಯಾಗಿನಲ್ಲಿ ಹುಣಸೆ ಕಾಡುನ್ನೆಲ್ಲಿ ಹೊಂಗೆ ಶಿವನಿ ನುಗ್ಗಿ ಬೆಳೆಯಲಾಗಿದ್ದು ಪ್ರತಿಯೊಂದು ಸಸ್ಯಕ್ಕೆ ಸರಕಾರ ನಿಗದಿಪಡಿಸಿದ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಅದೇ ರೀತಿ ಕಾಡು ಬಾದಾಮಿ ಬೇವು ಅಶೋಕ ಟ್ರೀ ಶ್ರೀಗಂಧ ಹುಣಸೆ ಹೊಂಗೆ ಸಿಲ್ವರ್ ವೋಕ್ ಹೆಬ್ಬೇವು ಮಹಾಗನಿ ಸೇರಿದಂತೆ ಅನೇಕ ಸಸ್ಯಗಳನ್ನು ಬೆಳೆಸಲಾಗಿದೆ. ಇವುಗಳನ್ನು 8×12 ಬ್ಯಾಗಿನಲ್ಲಿ ಬೆಳೆಸಲಾದ್ದು ಪ್ರತಿ ಸಸ್ಯಕ್ಕೆ 23 ಗಳನ್ನು ನಿಗದಿಪಡಿಸಲಾಗಿದೆ.
ರೈತರು ಸಾರ್ವಜನಿಕರು ತಮ್ಮ ಹೊಲಗದ್ದೆಗಳಲ್ಲಿ ಬಯಲು ಪ್ರದೇಶಗಳಲ್ಲಿ ಬೆಳೆಸಲಿಚ್ಛಿಸುವವರು ತಮ್ಮ ಪಹಣಿ ಪತ್ರಿಕೆ ಬ್ಯಾಂಕ್ ಪಾಸ್ ಬುಕ್ಕು ಆಧಾರ್ ಕಾರ್ಡ್ ಪ್ರತಿಗಳನ್ನು ಹಾಗೂ ಎರಡು ಫೆÇೀಟೋಗಳನ್ನು ಲಗತ್ತಿಸಿ ಸಾಮಾಜಿಕ ಅರಣ್ಯ ವಲಯ ಅಧಿಕಾರಿಗಳು ಶಿರಹಟ್ಟಿ ವಿಭಾಗ ಇವರಿಗೆ ಅಥವಾ ಮಹಾಂತೇಶ ಲಮಾಣಿ ಗಸ್ತು ವನಪಾಲಕ ಮೊಬೈಲ್ ನಂಬರ್ 63 62 89 86 96 ಇವರನ್ನು ಸಂಪರ್ಕಿಸಲು ಕೋರಲಾಗಿದೆ.