ಸಸ್ಯಕಾಶಿಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಂಜೆ ಚಾಲನೆ

ಬೆಂಗಳೂರು, ಜ.೧೮- ಗಣರಾಜ್ಯೋತ್ಸವ ನಿಮಿತ್ತ ರಾಜಧಾನಿ ಬೆಂಗಳೂರಿನ ಲಾಲ್‌ಬಾಗ್‌ನ ೨೧೫ನೇ ಆವೃತ್ತಿಯ ಫಲಪುಷ್ಪ ಪ್ರದರ್ಶನದಲ್ಲಿ ೧೨ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಅವರ ಅನುಭವ ಮಂಟಪ ಹೂವುಗಳಲ್ಲಿ ಅನಾವರಣಗೊಂಡಿದೆ. ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹನ್ನೊಂದು ದಿನಗಳ ಕಾಲ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.ಇಂದು ಸಂಜೆ ೬ ಗಂಟೆಗೆ ಲಾಲ್‌ಬಾಗಿನ ಗಾಜಿನ ಮನೆಯಲ್ಲಿ ಫಲಪುಪ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ರಾಮಲಿಂಗಾರೆಡ್ಡಿ, ನಾಡೋಜ ಡಾ.ಗೊ.ರು.ಚನ್ನಬಸಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತೋಟಗಾರಿಕೆ ಹಾಗೂ ರೇ? ಇಲಾಖೆ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್ ಹೇಳಿದ್ದಾರೆ.ಪ್ರದರ್ಶನಕ್ಕೆ ಭೇಟಿ ನೀಡುವವರನ್ನು ೩೨ ಲಕ್ಷ ಹೂವುಗಳು ಮತ್ತು ೬೮ ಪ್ರಭೇದಗಳ ಸಸ್ಯಗಳೊಂದಿಗೆ ರಚಿಸಲಾದ ತತ್ವಜ್ಞಾನಿ-ಕವಿಗಳ ಪ್ರತಿಮೆಗಳು ಸ್ವಾಗತಿಸಲಿವೆ. ಅದರಲ್ಲೂ ಬಸವಣ್ಣನವರ ಪ್ರತಿಮೆಯ ಜೊತೆಗೆ ಅನುಭವ ಮಂಟಪ (ಸಂಸತ್ತು) ಹೂವಿನ ಪ್ರತಿಕೃತಿಗಳು ಮತ್ತು ೧೦ ಅಡಿ ಎತ್ತರದ ಬಸವಣ್ಣನವರ ವಚನ ಬರೆಯುವ ಭಂಗಿ ಪ್ರಮುಖ ಆಕರ್ಷಣೆಯಾಗಿದೆ.ಅದೇ ರೀತಿ, ಅನುಭವ ಮಂಟಪವು ೩೪ ಅಡಿ ಅಗಲ ಮತ್ತು ೩೦ ಅಡಿ ಎತ್ತರದ ಮೂರು ಬಣ್ಣಗಳ ೧.೫ ಲಕ್ಷ ಕತ್ತರಿಸಿದ ಗುಲಾಬಿಗಳು, ಹಳದಿ, ಗುಲಾಬಿ ಮತ್ತು ಬಿಳಿ ಬಣ್ಣದ ಸೇವಂತಿಗೆ ಹೂವುಗಳು ಮತ್ತು ೧.೮೫ ಲಕ್ಷ ಗಾಂಫ್ರಿನಾ ಹೂವುಗಳಿಂದ ರಚಿಸಲಾಗಿದೆ. ತಾಜಾತನ ಮತ್ತು ನೋಟವನ್ನು ಉಳಿಸಿಕೊಳ್ಳಲು ಹೂವುಗಳನ್ನು ಆರು ದಿನಗಳ ನಂತರ ಬದಲಾಯಿಸಲಾಗುತ್ತದೆ ಎಂದು ತೋಟಗಾರಿಕೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.ಮತ್ತೊಂದೆಡೆ ಅಕ್ಕ ಮಹಾದೇವಿ, ಅಲ್ಲಮಪ್ರಭು, ಚೆನ್ನಬಸವಣ್ಣ, ಅಕ್ಕ ನಾಗಲಾಂಬಿಕೆ, ಮಡಿವಾಳ ಮಾಚಿದೇವ, ಕುಂಬಾರ ಗುಂಡಣ್ಣ ಮತ್ತಿತರರ ಮೂರ್ತಿಗಳು, ಅವರ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಸಂಘಟಕರು ೧.೫ ಲಕ್ಷ ಗಿಡಗಳನ್ನು ಬಳಸಿ ಇಷ್ಟಲಿಂಗ ಕಲಾಕೃತಿಯನ್ನೂ ರೂಪಿಸಿರುವುದು ನೋಡಗರ ಗಮನ ಸೆಳೆದಿದೆ.ಹೈಬ್ರಿಡ್ ಹೂವುಗಳನ್ನು ತೈವಾನ್, ಥೈಲ್ಯಾಂಡ್ ಮತ್ತು ದಕ್ಷಿಣ ಅಮೆರಿಕಾದಿಂದ ತರಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ೨.೮೫ ಕೋಟಿ ಬಜೆಟ್‌ನಲ್ಲಿ ಪ್ರದರ್ಶನ ನಡೆಯಲಿದೆ. ಸುಮಾರು ೧೦ ಲಕ್ಷ ಜನರು ಬರುವ ನಿರೀಕ್ಷೆಯಲ್ಲಿದ್ದೇವೆ ಮತ್ತು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಒಟ್ಟಿನಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಜನರು ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ವಿಶ್ವಗುರು ಬಸವಣ್ಣನವರ ಅನುಭವ ಮಂಪಟವನ್ನು ಹೂಗಳಿಂದ ಶೃಂಗರಿಸಿರುವುದು.

ಪ್ರವೇಶ ದರ ಎಷ್ಟು?
ಫಲಪುಷ್ಪ ಪ್ರದರ್ಶನಕ್ಕೆ ಸಮವಸ್ತ್ರ ಧರಿಸಿ ಬರುವ ೧೦ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರುತ್ತದೆ. ಉಳಿದಂತೆ ವಯಸ್ಕರಿಗೆ ೮೦, ಮಕ್ಕಳಿಗೆ (೧೨ ವ?ದೊಳಗೆ) ೩೦ ರೂ. ಶುಲ್ಕವನ್ನು ಪಾವತಿ ಮಾಡಬೇಕು. ರಜಾ ದಿನಗಳಲ್ಲಿ ಪ್ರವೇಶ ಶುಲ್ಕ ೧೦೦ ರೂ.ಗಳು.
ಲಾಲ್‌ಬಾಗ್ ೪ ಗೇಟ್‌ಗಳಲ್ಲಿಯೂ ಪ್ರವೇಶ ಶುಲ್ಕವನ್ನು ನೀಡಿ ಟಿಕೆಟ್ ಪಡೆಯಬಹುದು. ತೋಟಗಾರಿಕೆ ಇಲಾಖೆಯ ವೆಬ್‌ಸೈಟ್ ಮೂಲಕ ಆನ್‌ಲೈನ್ ಮೂಲಕ ಟಿಕೆಟ್ ಪಡೆಯಲು ಅವಕಾಶವಿದೆ.

ಪಾರ್ಕಿಂಗ್ ಎಲ್ಲಿ?
ಲಾಲ್‌ಬಾಗ್ ಸುತ್ತಲೂ ವಾಹನ ಪಾಕಿಂಗ್ ಸಮಸ್ಯೆ ಇದೆ. ಆದ್ದರಿಂದ ಫಲಪುಲ್ಪ ಪ್ರದರ್ಶನಕ್ಕೆ ಬರುವ ಜನರು ನಮ್ಮ ಮೆಟ್ರೋ ಬಳಕೆ ಮಾಡುವಂತೆ ಮನವಿ ಮಾಡಲಾಗಿದೆ.

ನಾಲ್ಕು ಚಕ್ರದ ವಾಹನಗಳಿಗೆ ಶಾಂತಿನಗರ ಬಸ್ ನಿಲ್ದಾಣದ ಬಹುಮಹಡಿ ಕಟ್ಟಡ, ಡಬಲ್ ರೋಡ್‌ನ ಹಾಪ್‌ಕಾಮ್ಸ್ ಆವರಣ ಮತ್ತು ಜೆಸಿ ರಸ್ತೆಯ ಬಿಬಿಎಂಪಿ ಬಹುಮಹಡಿ ಕಟ್ಟಡದಲ್ಲಿ ಪಾಕಿಂಗ್‌ಗೆ ಅವಕಾಶವಿದೆ. ದ್ವಿಚಕ್ರವಾಹನಗಳಿಗೆ ಮುಖ್ಯದ್ವಾರದ ಬಳಿ ಇರುವ ಅಲ್ ಅಮೀನ್ ಕಾಲೇಜು ಆವರಣದಲ್ಲಿ ಪಾಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.

ಈ ಬಾರಿಯ ವಿಶೇಷವೇನು?

  • ಫಲಪುಷ್ಪ ಪ್ರದರ್ಶನವು ೧೨ನೇ ಶತಮಾನಕ್ಕೆ ಕರೆದೊಯ್ಯಲಿದೆ.
  • ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಅನುಭವ ಮಂಟಪವನ್ನು ಹೂಗಳಲ್ಲಿ ನಿರ್ಮಾಣ ಮಾಡಲಾಗಿದೆ.
  • ಇಲ್ಲಿ ಬಸವಣ್ಣನವರ ಪುತ್ಥಳಿಯನ್ನು ಸಹ ಇರಿಸಲಾಗಿದೆ.
  • ಅನುಭವ ಮಂಟಪವನ್ನು ೩೪ ಅಡಿ ಅಗಲ ಮತ್ತು ೩೦ ಅಡಿ ಎತ್ತರ ಇರುವಂತೆ ನಿರ್ಮಾಣ.
  • ೪.೮ ಲಕ್ಷ ಹೂಗಳನ್ನು ಬಳಕೆ
  • ಪ್ರದರ್ಶನದ ಅವಧಿಯಲ್ಲಿ ಎರಡು ಬಾರಿಗೆ ೯.೬ ಲಕ್ಷ ಹೂಗಳು ಬಳಕೆ