ಸಸ್ಪೆನ್ಸ್, ಹಾರರ್ ಫ್ಯಾಂಟಸಿ ಪೂರ್ಣ

  • ಚಿಕ್ಕನೆಟಕುಂಟೆ ಜಿ.ರಮೇಶ್

ಸಸ್ಪೆನ್ಸ್,ಹಾರರ್ ಹಾಗು ಒಂದಷ್ಟು ಗೊಂದಲಗಳನ್ನು ಜೊತೆಯಲ್ಲಿಟ್ಟುಕೊಂಡ “ಫ್ಯಾಂಟಸಿ”ಚಿತ್ರ ಸದ್ದುಗದ್ದಲವಿಲ್ಲದೆ ಪೂರ್ಣಗೊಂಡಿದೆ.
ಬೆಂಗಳೂರು ಸುತ್ತಮುತ್ತ 24 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ,ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಜನವರಿ ಅಂತ್ಯಭಾಗ ಇಲ್ಲವೆ ಫೆಬ್ರವರಿಯಲ್ಲಿ ಚಿತ್ರ ತೆರೆಗೆ ತರುವ ಉದ್ದೇಶವೊಂದಿದೆ.
ಪವನ್ ಕುಮಾರ್ ,ನಿರ್ದೇಶನ ಮಾಡಿ ನಿರ್ಮಿಸಿ ಚಿತ್ರರಂಗದಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ‘ಫ್ಯಾಂಟಸಿ’ ಮೂಲಕ ಕಿರುತೆರೆ ನಟಿ ಪ್ರಿಯಾಂಕ ಇದೇ ಮೊದಲ ಬಾರಿಗೆ ಹಿರಿ ತೆರೆ ಪ್ರವೇಶಿಸಿದ್ದಾರೆ. ಮೊದಲ ಚಿತ್ರದಲ್ಲಿ ನೆಗೆಟೀವ್ ಶೇಡ್‍ನಲ್ಲಿ ಕಾಣಿಸಿಕೊಂಡು ಜನರನ್ನು ರಂಜಿಸಲು ಮುಂದಾಗಿದ್ದಾರೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ, ನಿರ್ದೇಶಕ ಪವನ್, ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರ. ಕುಟುಂಬದ ನಡುವೆ ನಡೆಯುವ ಕಥೆ, ಗೊಂದಲ,ಸಸ್ಪೆನ್ಸ್,ಹಾರರ್ ಅಂಶವಿದ್ದು ಕೊನೆ ತನಕ ಕುತೂಹಲ ಕಾಪಾಡಿಕೊಂಡು ಬರಲಾಗಿದೆ.
ಮಾನಸಿಕ ಅಸ್ವಸ್ಥ ಹುಡುಗನ ಸುತ್ತ ಕಥೆ ಸಾಗಲಿದೆ.ತಾಯಿ ಕೊಲೆ ಎಂದು ಭಾವಿಸುವ ಹುಡುಗ ಅದೇ ಗುಂಗಿನಲ್ಲಿರುತ್ತಾನೆ.ಆತನ ಕಲ್ಪನೆಯ ಸುತ್ತ ಚಿತ್ರ ಸಾಗಲಿದೆ ಎಂದರು.
ಬಾಲರಾಜ್ವಾಡಿ , ಭಾಸ್ಕರ್ ಪೊನ್ನಪ್ಪ ಎಂಬುದು ನನ್ನ ಪಾತ್ರ’ ಮಿಕ್ಕಿದ್ದನ್ನು ಸಿನಿಮಾದಲ್ಲಿಯೇ ನೋಡಿ ಎಂದರು
ನಾಯಕಿ ಪ್ರಿಯಾಂಕಾ ‘ಬಿಗ್​ಬಾಸ್​ನಲ್ಲಿ ದಿನದೂಡಿದಂತೆ ಕೊರೊನಾದಲ್ಲಿಯೂ ಸಮಯ ಕಳೆದಿದ್ದೆವು. ಆಗ ಸಿನಿಮಾ ಫ್ಯಾಂಟಸಿ ಮೊದಲ ಸಿನಿಮಾ ಆದರೂ, ಧಾರಾವಾಹಿಯಂತೆ ಇಲ್ಲಿಯು ನೆಗೆಟಿವ್​ ಪಾತ್ರ ಮುಂದುವರಿದಿದೆ ಎಂದರು.
ಬಾಲನಟ ಅನುರಾಗ್ ಅನುಭವ ಹಂಚಿಕೊಂಡರು
ಹರಣಿ,ಮೂರ್ತಿ, ಸೋನಿಕಾ ಸೇರಿದಂತೆ ಮತ್ತಿತರ ಕಲಾವಿದರ ದಂಡು ಚಿತ್ರದಲ್ಲಿದೆ. ಚಿತ್ರದ ಚಿತ್ರೀಕರಣದ ಕೆಲಸವೂ ಏಕಕಾಲದಲ್ಲಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಚಿತ್ರೀಕಣಸ ಸಾಗಿದೆ ಎಂದು ಅವರು ವಿವರ ನೀಡಿದರು..
ಪಿ.ಕೆ.ಎಚ್ ದಾಸ್ ಕ್ಯಾಮರಾ, ಆರ್.ಎಸ್ ಗಣೇಶ್ ನಾರಾಯಣ್ ಸಂಗೀತ ಚಿತ್ರಕ್ಕಿದೆ.

ಥ್ರಿಲ್ಲರ್ ಶೈಲಿ
ಥ್ರಿಲ್ಲರ್ ಶೈಲಿಯ ಸಿನಿಮಾ. ಚಿತ್ರದ ಶೇ. 90 ಭಾಗ ಒಳಾಂಗಣ, ಶೇ. 10 ಹೊರಾಂಗಣದಲ್ಲಿ ಚಿತ್ರೀಕರಣ ಮಾಡಲಾಗಿದೆ.. ಪೋಸ್ಟ್ ಪ್ರೊಡಕ್ಷನ್​ ಕೆಲಸವೂ ನಡೆಯುತ್ತಿದೆ. ಫೆಬ್ರವರಿ ವೇಳೆಗೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು ನಿರ್ದೇಶಕ ಪವನ್