ಸಸ್ಪೆನ್ಸ್, ಥ್ರಿಲ್ಲರ್ `ಸ್ಥಬ್ಧ’ ಟ್ರೇಲರ್ ಬಿಡುಗಡೆ

ಭ್ರಮೆಯ ಸುತ್ತ ನಡೆಯುವ  ಹಾರಾರ್, ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧರಿಸಿದ ಚಿತ್ರ “ಸ್ತಬ್ಧ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸದ್ದು ಮಾಡಿದೆ. ಪ್ರತಾಪ್ ಸಿಂಹ ಹಾಗು ಹರ್ಷಿಕಾ ಪೂಣಚ್ಚ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಬಿಡುಗಡೆ ವೇಳೆ ಮಾತಿಗಿಳಿದ ನಾಯಕ ಪ್ರತಾಪ್ ಸಿಂಹ,ನಲವತ್ತೈದು ದಿನಗಳ ಕಾಲ ಬೆಂಗಳೂರು, ಮಂಗಳೂರು, ಉಡುಪಿಯಲ್ಲಿ ಚಿತ್ರೀಕರಣ ನಡೆದಿದೆ. ಹರ್ಷಿಕಾ ಪೂಣಚ್ಛ, ರಾಘವೇಂದ್ರ ರಾಜಕುಮಾರ್, ಪ್ರಿಯಾಂಕ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.ನಿರ್ದೇಶಕ ಲಾಲಿ ರಾಘವ  ನಿರ್ಮಾಪಕರಿಗೆ ಧನ್ಯವಾದ. ಜೂನ್ 9 ರಂದು ಚಿತ್ರ ಬಿಡುಗಡೆಯಾಗಲಿದೆ ನೋಡಿ ಹಾರೈಸಿ ಎಂದರು.

ನಿರ್ದೇಶಕ ಲಾಲಿ ರಾಘವ ಮಾತನಾಡಿ. ನಿರ್ಮಾಪಕ ವಿದ್ಯಾ ಸಾಗರ್ ಅಣ್ಣನ ಸ್ನೇಹಿತರು. ಚಿತ್ರದ ಕಥೆ ಕೇಳಿದ ಅವರು, ನಿರ್ಮಾಣಕ್ಕೆ ಮುಂದಾದರು. ತಂಡದ ಸಹಕಾರದಿಂದ ಚಿತ್ರ ಈಗ ಬಿಡುಗಡೆ ಹಂತಕ್ಕೆ ಬಂದಿದೆ ಎನ್ನುವ ಮಾಹಿತಿ ಹಂಚಿಕೊಂಡರು.

ನಿರ್ಮಾಪಕ ಡಾ.ವಿದ್ಯಾಸಾಗರ್, ಒಂದೊಳ್ಳೆ ಚಿತ್ರ ನಿರ್ಮಾಣ ಮಾಡಿರುವ ಖುಷಿಯಿದೆ ಎಂದರೆ ನಾಯಕಿ ಹರ್ಷಿಕಾ ಪೂಣಚ್ಚ ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಮಾತನಾಡಿ, ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಚೆನ್ನಾಗಿದೆ. ನಾನು ಕೂಡ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು. ನಟ ಭಜರಂಗಿ ಪ್ರಸನ್ನ,  ಸಂಗೀತ ನಿರ್ದೇಶಕ ಆರವ್ ರಿಷಿಕ್, ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.