ಸಸ್ಪೆನ್ಸ್, ಥ್ರಿಲ್ಲರ್ ಸೆಟ್ಟೇರಿದ ಬಿಂಗೋ.

* ಚಿ.ಗೋ ರಮೇಶ್

ಸಸ್ಪೆನ್ಸ್ ಥ್ರಿಲ್ಲರ್  ಕಥಾಹಂದರ ಹೊಂದಿರುವ  ಚಿತ್ರ ಬಿಂಗೋ ಸೆಟ್ಟೇರಿದೆ. ಮಾದಕ ಬೆಡಗಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅರ್ ಕೆ ಚಂದನ್, ರಕ್ಷಾ ನಿಂಬರ್ಗಿ ನಾಯಕ,ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಚಿತ್ರದ ಮುಹೂರ್ತಕ್ಕೆ ಸಚಿವ ವಿ.ಸೋಮಣ್ಣ,ಮುನಿರತ್, ನಟ ವಸಿಷ್ಠ ಸಿಂಹ ಮತ್ತಿತರು ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು. ಈ ವೇಳೆ ಮಾತಿಗಿಳಿದ ನಿರ್ದೇಶಕ ಶಂಕರ್ ಕೋನಮಾನಹಳ್ಳಿ,  ಮೊದಲ ಚಿತ್ರ “ಶಂಭೋ ಶಿವ ಶಂಕರ” ಸದ್ಯದಲ್ಲೇ ಬಿಡುಗಡೆಯಾಗಲಿದೆ. “ಬಿಂಗೊ” ಪದಕ್ಕೆ ಹಲವು ಅರ್ಥಗಳಿದೆ. ಜನರ ನಿರ್ಧಾರಕ್ಕೆ ಬಿಡಲಾಗಿದೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದ್ದು ಮುಂದಿನ ವರ್ಷ ತೆರೆಗೆ ತರುವ ಸಾದ್ಯತೆ ಇದೆ.ಚಿತ್ರದಲ್ಲಿ ರಾಜೇಶ್ ನಟರಂಗ, ಪವನ್, ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಮುಂತಾದ ಕಲಾವಿದರಿದ್ದಾರೆ ಎಂದರು.

ನಟಿ ರಾಗಿಣಿ,ಪಾತ್ರ ತುಂಬಾ ಚೆನ್ನಾಗಿದೆ. ಕಥೆ ಹೆಚ್ಚು ಹೇಳುವ ಹಾಗಿಲ್ಲ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ಭಿನ್ನವಾದ ಪಾತ್ರ. ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಲು ಖುಷಿಯಾಗುತ್ತದೆ ಎಂದರು.

ನಾಯಕ ಆರ್ ಕೆ ಚಂದನ್, ಹಿರಿತೆರೆಯಿಂದ ಸಿನಿಮಾಕ್ಕೆ ಬಂದಿದ್ದೇನೆ ಮೊದಲ ಚಿತ್ರ. ಪ್ರೋತ್ಸಾಹವಿರಲಿ ಎಂದರು. ನಿರ್ಮಾಪಕ ಪುನೀತ ಹಾಗೂ ಆರ್ ಪರಾಂಕುಶ್ ನಾಯಕಿ ರಕ್ಷಾ ನಿಂಬರ್ಗಿ, ಸಂಗೀತ ನಿರ್ದೇಶಕ ಹಿತನ್ ಹಾಸನ್, ಛಾಯಾಗ್ರಾಹಕ ನಟರಾಜ್ ಮುದ್ದಾಲ್  ಚಿತ್ರದ ಕುರಿತು ಮಾತನಾಡಿದರು. ‌