ಸಸ್ಪೆನ್ಸ್ ,ಥ್ರಿಲ್ಲರ್ ಬೈಪಾಸ್ ಪೂರ್ಣ

ಹೊಸಬರು ಮತ್ತು ಹಳಬರ‌ ಸಮ್ಮಿಶ್ರಣದಂತಿರುವ ” ” ” ಬೈಪಾಸ್” ಚಿತ್ರ ತಡವಾದರೂ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ.

ಮೂರು ವರ್ಷಗಳ ಬಳಿಕ ಚಿತ್ರವನ್ನು ನಿರ್ದೇಶಕ ಎಸ್ .ಬಿ ಶ್ರೀನಿವಾಸ್ ಪೂರ್ಣಗೊಳಿಸಿದ್ದಾರೆ. ಚಿತ್ರಕ್ಕೆ ಭರತ್ ರಾಜ್ ಮತ್ತು‌ ಮಹೇಶ್ ಎಂ.ಬಿ ಪ್ರೊಡಕ್ಷನ್ ಅಡಿ ಬಂಡವಾಳ ಹಾಕಿದ್ದಾರೆ.

ಈ ಹಿಂದೆ “ಪರಿಧಿ” ಚಿತ್ರ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಬೈಪಾಸ್ ಮೂಲಕ ಚಿತ್ರರಂಗದಲ್ಲಿ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಅಧಿಕೃತ ರಹದಾರಿ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ.

ದಂಪತಿ ಹನಿಮೂನ್ ಗೆ ಬೈಪಾಸ್ ರಸ್ತೆ ಯಲ್ಲಿ ತೆರಳುವ ಸಂದರ್ಭದಲ್ಲಿ ಅದರ ಸುತ್ತ ನಡೆಯುವ ಸಸ್ಪೆನ್ಸ್ , ಥ್ರಿಲ್ಲರ್ ಜಾನರ್ ಕಥೆ ಇರುವ ಬೆಂಗಳೂರು ಮತ್ತು ಸಕಲೇಶಪುರ ಪುರ ಸುತ್ತಮುತ್ರ ಚಿತ್ರೀಕರಣ ಮಾಡಲಾಗಿದೆ.ದಂಪತಿಯ ಸುತ್ತ ಅನೇಕ ಪಾತ್ರಗಳು ಬಂದು ಹೋಗುತ್ತವೆ. ಈ ವೇಳ ಘಟನೆಯೊಂದು ನಡೆಯುತ್ತದೆ ‌ಅದು ಏನು ಎನ್ನುವುದು ಸಸ್ಪೆನ್ಸ್ ಎಂದರು ನಿರ್ದೇಶಕ ಶ್ರೀನಿವಾಸ್.

2017ರಲ್ಲಿ ಚಿತ್ರ ಪೂರ್ಣಗೊಂಡಿತ್ತು‌ ಪೋಸ್ಟ್ ‌ಪ್ರೊಡಕ್ಷನ್ ಕಳೆ್ದ ವರ್ಷ ಪೂರ್ಣ ಮಾಡಿದ್ದೆವು.‌ಈಗ ಸೆನ್ಸಾರ್ ಹಂತಕ್ಕೆ ಬಂದಿದೆ. ತಡವಾಗಿದೆ. ಸೆನ್ಸಾರ್ ನಿಂದ ಪ್ರಮಾಣ ಪತ್ರ ಬಂದ ನಂತರ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕೋ ಅಥವಾ ಒಟಿಟಿ ಮುಲಕ ಬಿಡುಗಡೆ‌‌ ನಿರ್ಧಾರ ಮಾಡುತ್ತೇವೆ ಎಂದರು.

ಚಿತ್ರದಲ್ಲಿ ಭರತ್ ಕುಮಾರ್ ,ನೀತುಗೌಡ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ಉಳಿದಂತೆ ನೇಹಾ ಸಕ್ಸೇನಾ,ತಿಲಕ್, ಚಿಕ್ಜಣ್ಣ,ತಬಲ ನಾಣಿ,ಮಾಸ್ಟರ್ ಆನಂದ್ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು

ವಿಜಯಕೃಷ್ಣ ಸಂಗೀತ,‌ನಿರಂಜನ ಬಾಬು ಕ್ಯಾಮರಾ ಚಿತ್ರಕ್ಕಿದೆ.