ಸಸ್ಪೆನ್ಸ್,ಥ್ರಿಲ್ಲರ್ ನಲ್ಲಿ ಪೂಜಾ ಗಾಂಧಿ

ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಕನ್ನಡ ಸಿನಿಮಾರಂಗದಲ್ಲಿ‌ ಗುರುತಿಸಿಕೊಂಡಿರಿವ ನಟಿ ಹಲವು ದಿನಗಳ‌ ಕಾಣೆ ಬಳಿಕ ಒಂದರ ಹಿಂದೆ‌‌ ಒಂದು ಚಿತ್ರ ಒಪ್ಪಿಕೊಳ್ಳುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಂದ ಯಾವುದೇ ಸಿನಿಮಾ‌ವನ್ನು ಪೂಜಾಗಾಂಧಿ ಒಪ್ಪಿಕೊಂಡಿರಲಿಲ್ಲ. ವರ್ಷದ ಆರಂಭದಲ್ಲಿ ಕೆ.ಎಸ್.ಜವಾಹರ್ ನಿರ್ದೇಶನದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದ ಮಳೆ‌ಹುಡುಗಿ ಇದೀಗ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಪೂಜಾ ಗಾಂಧಿ ಅವರಿಗೆ ವಿಭಿನ್ನ ಲುಕ್ ತಂದುಕೊಟ್ಟಿದ್ದ ದಂಡುಪಾಳ್ಯ ಚಿತ್ರವನ್ನು ನಿರ್ದೇಶನ ಮಾಡಿದ್ದ ಶ್ರೀನಿವಾಸ ರಾಜು ಆಕ್ಷನ್ ಹೇಲಲಿರುವ ಮತ್ತೊಂದು ಹೊಸ ಸಿನಿಮಾದಲ್ಲಿ ಪೂಜಾ ಗಾಂಧಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಟಿ ಪೂಜಾ ಗಾಂಧಿ ಮತ್ತು ನಿರ್ದೇಶಕ ಶ್ರೀನಿವಾಸ ರಾಜು ಅವರ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ನೂತನ ಸಿನಿಮಾ ಸಸ್ಪೆನ್ಸ್ ಹಾಗು ಥ್ರಿಲ್ಲರ್ ಜಾನರ್ ಕಥಾಹಂದರವನ್ನು ಹೊಂದಿರಲಿದ್ದು, ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಿ ಶೇ. 50 ರಷ್ಟು ಭಾಗದ ಚಿತ್ರೀಕರಣವೂ ಸಹ ಮುಗಿದಿದೆಯಂತೆ. ಅಲ್ಲದೆ ಈ ಚಿತ್ರ ಕನ್ನಡ ಭಾಷೆ ಮಾತ್ರವಲ್ಲದೆ ದಕ್ಷಿಣ ಭಾರತದ ತೆಲುಗು, ತಮಿಳು ಸೇರಿದಂತೆ ಇತರ ಭಾಷೆಗಳಲ್ಲಿಯೂ ಕೂಡ ಡಬ್ ಆಗಿ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ಬಿಡುಗಡೆ ಆಗಲಿದೆ.

2012ರಲ್ಲಿ ಮೊದಲ ಬಾರಿಗೆ ಶ್ರೀನಿವಾಸ ರಾಜು ಅವರು ದಂಡುಪಾಳ್ಯ ಹಂತಕರ ಕುರಿತಾದ ಕಥಾಹಂದರ ಇಟ್ಟುಕೊಂಡ ದಂಡುಪಾಳ್ಯ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ದಂಡುಪಾಳ್ಯ 3 ಚಿತ್ರದ ನಂತರ ಯಾವುದೇ ಸಿನಿಮಾದಲ್ಲಿಯೂ ನಟಿಸದಿದ್ದ ಪೂಜಾ ಗಾಂದಿ ಇತ್ತೀಚೆಗಷ್ಟೇ ‘ಸಂಹಾರಿಣಿ’ ಹೆಸರಿನ ಚಿತ್ರದಲ್ಲಿ ಸಹ ನಟಿಸಿದ್ದರು.