ಸಸಿ ಪೆÇೀಷಣೆ ಕುರಿತು ಮಾಹಿತಿ ಪಡೆದ ಎಕಲಾರ ಶಾಲೆಯ ಮಕ್ಕಳು

(ಸಂಜೆವಾಣಿ ವಾರ್ತೆ)
ಔರಾದ್ :ಆ.4: ಮಕ್ಕಳಲ್ಲಿ ಕ್ಷೇತ್ರ ಪ್ರವಾಸಗಳು ನೈಜ ಪ್ರಪಂಚದ ಸಂಪರ್ಕಗಳನ್ನು ಮಾಡುವ ಮೂಲಕ ತರಗತಿ ಕಲಿಕೆಯನ್ನು ಹೆಚ್ಚಿಸುವ ಒಂದು ಅದ್ಭುತ ಮಾರ್ಗವಾಗಿದ್ದು, ತಾಲೂಕಿನ ಎಕಲಾರ ಪ್ರಾಥಮಿಕ ಶಾಲೆಯ ಮಕ್ಕಳು ಗುರುವಾರ ಬೋರಾಳ ಹೊರವಲಯದ ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ ನರ್ಸರಿ ಕೇಂದ್ರಗಳಿಗೆ ಭೇಟಿ ನೀಡಿ ಸಸಿ ಬೆಳೆಸುವ ನೈಜ ಅನುಭವ ಪಡೆದುಕೊಂಡರು.
ವಿಜ್ಞಾನ ಬೋಧಕ ಬಾಲಾಜಿ ನೇತೃತ್ವದಲ್ಲಿ ಕ್ಷೇತ್ರ ಭೇಟಿ ಕೈಗೊಂಡ ಮಕ್ಕಳು ಅರಣ್ಯಿಕರಣ ಸೇರಿದಂತೆ ಸಸಿಗಳ ಬೆಳವಣಿಗೆಗೆ ಮಣ್ಣು, ಗೊಬ್ಬರ ಹಾಗೂ ಮರಳು ಸಹ ಬೇಕಾಗುತ್ತದೆ ಎಂಬ ಅಂಶ ತಿಳಿದರು. ಹಸಿರು ಮನೆ ಪರಿಣಾಮದಿಂದ ಸಸಿಗಳ ರಕ್ಷಣೆ ಹಾಗೂ ಸಸಿಗಳ ಬೆಳವಣಿಗೆಯಲ್ಲಿ ತೇವಾಂಶ, ಉಷ್ಣಾಂಶದ ಮಹತ್ವ ತಿಳಿದು ಮಳೆ ಹೆಚ್ಚಾಗುವಿಕೆ ಮತ್ತು ಕೊರತೆಯ ಬಗ್ಗೆ ಪ್ರಶ್ನೆಗಳು ಕೇಳಿ ಉತ್ತರ ಪಡೆದುಕೊಂಡರು.
ಸಾಮಾಜಿ ಅರಣ್ಯ ವಲಯ ತಾಲೂಕು ಅಧಿಕಾರಿ ಹಾವಪ್ಪ ಶೆಂಬೆಳ್ಳೆ ಮಾತನಾಡಿ, ನರ್ಸರಿ ಕೇಂದ್ರಗಳಲ್ಲಿ ಸಸಿಗಳನ್ನು ಅತೀವ ಕಾಳಜಿಯಿಂದ ಬೆಳೆಸುತ್ತೆವೆ. ನಂತರದಲ್ಲಿ ಅವುಗಳನ್ನು ವಿವಿಧ ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ರೈತರ ಜಮೀನುಗಳಲ್ಲಿ ಬೆಳೆಸಲು ಪ್ರೇರೆಪಿಸಿ, ಪೆÇ್ರೀತ್ಸಾಹಧನ ಸೇರಿದಂತೆ ಸಸಿಗಳು ಬೆಳೆಸುವ ರೈತರಿಗೆ ಅಗತ್ಯ ಸೌಲಭ್ಯಗಳು ಒದಗಿಸುತ್ತೆವೆ ಎಂದರು. ಮಕ್ಕಳ ಕ್ಷೇತ್ರ ಭೇಟಿ ಸವಿ ನೆನಪಿಗಾಗಿ ಮನೆ ಅಂಗಳ ಹಾಗೂ ಹೊಲಗಳಲ್ಲಿ ನೆಡಲು ಸಸಿ ನೀಡಿ ಶುಭ ಹಾರೈಸಿದರು.
ಮಕ್ಕಳು ನರ್ಸರಿಯಲ್ಲಿ ಬೆಳೆದ ಹಲವು ಬಗೆಯ ಸಸಿಗಳು ಕಂಡು ಖುಷಿಪಟ್ಟರು. ಬ್ಯಾಗ್‍ಗಳಲ್ಲಿ ಮಕ್ಕಳು ಖುದ್ದು ಮಣ್ಣು ತುಂಬಿ ಸಂಭ್ರಮಿಸಿದರು. ಪ್ರತಿ ಗಿಡಗಳ ಮಹತ್ವ ಮತ್ತು ಬಳಕೆ ವಿವಿಧ ವಿಷಯಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿದರು. ಎಕಲಾರ ಸಮೂಹ ಸಂಪನ್ಮೂಲ ವ್ಯಕ್ತಿ ಮಹಾದೇವ ಘುಳೆ, ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಅರಣ್ಯ ಇಲಾಖೆ ಸಿಬ್ಬಂದಿ ರಾವಣ ನಾಮಾ, ಶಿವಾಜಿ ರೂಪಚಂದ್, ಶಿಕ್ಷಕರಾದ ಜೈಸಿಂಗ್ ಠಾಕೂರ್, ಬಾಲಾಜಿ ಅಮರವಾಡಿ, ಕಿರಣ ಹಿಪ್ಪಳಗಾವೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಶಾಲೆಯಲ್ಲಿ ಸಂತಸ ಹಾಗೂ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ನಾವುಗಳು ಶಾಲೆಯಿಂದ ನಡೆದುಕೊಂಡೆ ನರ್ಸರಿ ಕೇಂದ್ರದಲ್ಲಿನ ಗಿಡಗಳು ಬೆಳೆಸುವುದು ಹೇಗೆಂದು ತಿಳಿಯಲು ಬಂದಿದ್ದೆವೆ. ಹಲವು ಹೊಸ ವಿಷಯಗಳು ತಿಳಿದುಕೊಂಡಿದ್ದು ಖುಷಿ ತಂದಿದೆ.
ಅನ್ನಪೂರ್ಣ ಸಂತೋಷ,
7ನೇ ತರಗತಿ ವಿದ್ಯಾರ್ಥಿನಿ

ಕ್ಷೇತ್ರ ಪ್ರವಾಸಗಳು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಪರಿಸರ ವೀಕ್ಷಿಸಲು ಅವಕಾಶ ಒದಗಿಸುತ್ತವೆ. ಪ್ರತ್ಯಕ್ಷ ಅನುಭವ ಮಕ್ಕಳಿಗೆ ಮಾಹಿತಿ ಮತ್ತು ತಿಳುವಳಿಕೆ ಮಟ್ಟ ಹೆಚ್ಚಿಸಿ ಕಲಿಕೆಯನ್ನು ಉತ್ಕøಷ್ಟಗೊಳಿಸುತ್ತದೆ