ಸಸಿ ನೇಡುವ ಮೂಲಕ ಪರಿಸರ ದಿನಾಚರಣೆ

ಕಲಬುರಗಿ:ಜೂ.6:ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಸ್ಟೇಷನ್ ಬಜಾರ್ ಕಲ್ಬುರ್ಗಿಯ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಕಾಲೇಜಿನ ಆವರಣದಲ್ಲಿ ಸಸಿ ನೇಡುವುದರ ಮೂಲಕ ಆಚರಿಸಲಾಯಿತು.
ಎನ್ ಎಸ್ ಎಸ್ ವಿಭಾಗಿಯ ಅಧಿಕಾರಿಗಳು ಚಂದ್ರಶೇಖರ್ ದೊಡ್ಮನಿ ಮಾತನಾಡಿ ವಿಶ್ವ ಸಮತೋಲನದಿಂದ ಇರಬೇಕಾದರೆ ಪರಿಸರ ಮುಖ್ಯ ಈ ನಿಟ್ಟಿನಲ್ಲಿ ಎನ ಎಸ ಎಸ್ ಸ್ವಯಂಸೇವಕರು ಹಾಗೂ ಇಂದಿನ ಯುವ ಪೀಳಿಗೆ ಪರಿಸರದ ಮಹತ್ವವನ್ನು ಅರಿತು ಪರಿಸರ ನಾಶವನ್ನು ತಡೆಗಟ್ಟಿ ಹೆಚ್ಚೆಚ್ಚು ಗಿಡಗಳನ್ನು ಮೂಲಕ ಪರಿಸರ ಸಂರಕ್ಷಣೆ ಮಾಡುವ ಮಹತ್ವದ ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು. ಪ್ರಾಂಶುಪಾಲರಾದ ಸುಜಾತ ಬಿರಾದಾರ್ ಮಾತನಾಡಿ ಇರೋದೊಂದೆ ಭೂಮಿ ಇದನ್ನು ಸುರಕ್ಷಿತವಾಗಿ ಇಡಬೇಕಾದರೆ ಅಪಾರ ಪ್ರಮಾಣದಲ್ಲಿ ಸಸಿಗಳನ್ನು ನೀಡುವುದರ ಮೂಲಕ ಶೇಕಡ 33ರಷ್ಟು ಹಸಿರೀಕರಣ ಮಾಡಬೇಕು. ಅಂದಾಗ ಮಾತ್ರ ಪ್ರಕೃತಿ ಸಮತೋಲನದಿಂದ ಇರಲು ಸಾಧ್ಯ.ಆ ಮೂಲಕ ನಮ್ಮ ಆರೋಗ್ಯವು ಸಂರಕ್ಷಣೆ ಆಗುತ್ತದೆ. ಮಳೆಯೂ ಸಹ ಹೆಚ್ಚಿಗೆ ಬೀಳಲು ಕಾರಣವಾಗುತ್ತದೆ.ಈ ನಿಟ್ಟಿನಲ್ಲಿ ಮನುಷ್ಯ ತನ್ನ ಸ್ವಾರ್ಥ ಬಿಟ್ಟು ಗಿಡಗಳನ್ನು ನೆಡುವಂತಾಗಬೇಕು. ನೇತೃತ್ವ ಎ??????ಸ್ ಅಧಿಕಾರಿ ಪಾಂಡು ಎಲ್ ರಾಥೋಡ್ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಚಂದ್ರಕಾಂತ್ ಸನದಿ, ಬಾಬು ಲೋಕು ಚವಾಣ್ ,ಬಲರಾಮ್ ಚೌಹಾಣ್ ,ಮಾಪಣ್ಣ ಜಿರೋಳ್ಳಿ, ಮಲ್ಲಯ್ಯ ಮಠಪತಿ ಶಶಿಧರ್ ಭೂಸನೂರ್ ವಿಜಯಲಕ್ಷ್ಮಿ ರೆಡ್ಡಿ ರೇಖಾ ರಾಯಚೂರುಕರ್ ಪಲ್ಲವಿ ಕುಲಕರ್ಣಿ ಶ್ರೀನಿವಾಸ್ ಐ ಜಿ ಹಾಗೂ ಸ್ವಯಂಸೇವಕರು ವಿದ್ಯಾರ್ಥಿಗಳು ಹಾಜರಿದ್ದರು.