ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

ಮೈಸೂರು: ಜೂ.05: ನಗರದ ಇಂದು ವಿಶ್ವ ಪರಿಸರ ದಿನದ ಅಂಗವಾಗಿ ವಾರ್ಡ್ ನಂ.56 ರ ಕೃಷ್ಣಮೂರ್ತಿಪುರಂ ನಲ್ಲಿರುವ ಆನಂತಸ್ವಾಮಿ ಉದ್ಯಾನವನ ದಲ್ಲಿ ಹಾಗೂ ಅಶೋಕಪುರಂ ನ ಅಂಬೇಡ್ಕರ್ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಹಾಗೂ ವಿಶೇಷವಾಗಿ ಕ್ಷೇತ್ರದಲ್ಲಿರುವ ಪ್ರತಿ ಮನೆಗಳಿಗೂ ಎರಡರಂತೆ ಆರ್ಯುವೇದ ಗಿಡಗಳನ್ನು ನೀಡುವ ಕಾರ್ಯಕ್ಕೆ ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ರವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಇಂದು ವಿಶ್ವ ಪರಿಸರ ದಿನ ಒಂದೇ ದಿನಕ್ಕೆ ಇದು ಸೀಮಿತವಾಗಬಾರದು. ಪ್ರಧಾನಿ ಮೋದಿಯವರ ಸರ್ಕಾರ ಪರಿಸರ ಸಂರಕ್ಷಣೆಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ, ಗ್ರೀನ್ ಸ್ಕಿಲ್ ಡೆವಲಪ್ಮೆಂಟ್, ನಮಾಮಿ ಗಂಗೆ, ವಿದ್ಯುತ್ ವಾಹನಗಳಿಗೆ ಗಳಿಗೆ ಉತ್ತೇಜನ, 2030 ರ ಒಳಗೆ ಬಾರತದ ರೈಲ್ವೇಯನ್ನು ಸಂಪೂರ್ಣ ವಿದ್ಯುತೀಕರಣ ಮಾಡುವಿಕೆ ಇವೆಲ್ಲ ಮಹತ್ತರವಾದವುಗಳು. ಮುಂದಿನ ಪೀಳಿಗೆಗೆ ಪರಿಸರ ಜಾಗೃತಿಯನ್ನು ನೀಡಬೇಕಾದ ಹೊಣೆ ನಮ್ಮ ಮೇಲಿದೆ.
ಕೃಷ್ಣಮೂರ್ತಿಪುರಂನಲ್ಲಿ ವಾಸವಾಗಿದ್ದ ಸಂಗೀತಕಾರರಾಗಿದ್ದ ಅನಂತಸ್ವಾಮಿ ಅವರ ಅವರ ಹೆಸರಲ್ಲಿರುವಂತಹ ಪಾರ್ಕ್ ಅನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿ ಅವರ ಹಾಡುಗಳು ಸದಾ ಕಾಲ ಪಾರ್ಕ್ ನಲ್ಲಿ ಕೇಳುವಂತಹ ಯೋಜನೆಯನ್ನ ರೂಪಿಸಿದ್ದೇವೆ. ಇದೀಗ ಪುಟ್ಟ ಬಾಲಕಿ ಚಿರಂತನ ಗೆ ಆಯುರ್ವೇದದ ಗಿಡವನ್ನ ಕೊಡುವ ಮೂಲಕ ಒಂದು ವರ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ, ನಮ್ಮಲ್ಲಿರುವಂತಹ 62 ಸಾವಿರ ಮನೆಗಳಿಗೆ 2 ಆಯುರ್ವೇದಿಕ್ ಗಿಡಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು.
ಮರಗಳನ್ನು ದೇವರಂತೆ ಕಾಣುವ ಸಂಸ್ಕೃತಿ ನಮ್ಮದು
ಅರಳಿ ಮರವನ್ನು ವೈಜ್ಞಾನಿಕವಾಗಿ ವರದಾನವೆಂದು ಪರಿಗಣಿಸಲಾಗುತ್ತದೆ. ಈ ಪವಿತ್ರ ಮರವು ಹಗಲಿನ ವೇಳೆಯಲ್ಲಿ ಮಾತ್ರವಲ್ಲ, ರಾತ್ರಿಯೂ ಕೂಡ ಆಮ್ಲಜನಕವನ್ನು ಹೊರಹಾಕುತ್ತದೆ. ಇದು ಆಮ್ಲಜನಕದ ಮೂಲವೆಂದು ಪರಿಗಣಿಸಲಾಗುತ್ತದೆ. ಅರಳಿ ಮರವು ತನ್ನ ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧೀಕರಿಸುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟೇರಿಯಗಳನ್ನು ನಾಶಗೊಳಿಸುತ್ತದೆ. ಒಂದೊಂದು ಪರಿಸರದ ವಿಚಾರವನ್ನು ತೆಗೆದುಕೊಂಡು ಇದೇ ರೀತಿ ಪರಿಸರದ ಬಗ್ಗೆ ಕಾಳಜಿ ವಹಿಸುವ ಕಾರ್ಯವನ್ನು ನಾವೆಲ್ಲ ಮಾಡಬೇಕಿದೆ ಎಂದರು.
ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಪಲ್ಲವಿ ಬೇಗಂ, ಪಾಲಿಕೆಯ ನಾಮ ನಿರ್ದೇಶಿತ ಸದಸ್ಯರಾದ ಪಿ.ಟಿ ಕೃಷ್ಣ, 56 ನೆ ವಾರ್ಡಿನ ಇಂಚಾರ್ಜ್ ನಾಗಶಂಕರ್, ಬಿಜೆಪಿ ಪ್ರಮುಖರಾದ ಕೀರ್ತಿ ರಾಜ್, ರಾಜೀವ್, ರವಿ, ಮಧು, ಕುಮಾರ್, ಜಿತೇಂದ್ರ, ಪ್ರವೀಣ್, ಶ್ರೀಧರ್, ನಗರಪಾಲಿಕಾ ಆರೋಗ್ಯ ಅಧಿಕಾರಿಗಳು, ವಲಯ ಆಯುಕ್ತರುಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು, ಪೆÇಲೀಸ್ ಠಾಣೆಯ ನಿರೀಕ್ಷಕರು ಹಾಜರಿದ್ದರು.