ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ

ಅಫಜಲಪುರ: ಜೂ.5:ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಕ್ಕರಸಾವಳಗಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಸ್ಕೌಟ್ ಘಟಕದ ವತಿಯಿಂದ ಸಸಿ ನೆಡುವ ಮೂಲಕ ಜಾಗೃತಿ ಮೂಡಿಸಿ ವಿಶ್ವ ಪರಿಸರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ಸಿದ್ದಾರಾಮ ಮಾಹೂರ, ಉಪಾಧ್ಯಕ್ಷ ದಶರಥ ಮಾಂಗ, ಸದಸ್ಯರಾದ ದತ್ತು ನಡೂರ, ಬಸವರಾಜ ಕಿರಸಾವಳಗಿ, ಮುಖ್ಯಗುರು ಜಾವೀದ ಹುಂಡೇಕಾರ, ಶಿಕ್ಷಕರಾದ ಪರಮಾನಂದ ಸರಸಂಬಿ, ದೇವೇಂದ್ರ ರಾಠೋಡ, ಸಿದ್ದಪ್ಪ ವಾಳಿ ಮತ್ತು ಸ್ಕೌಟ್ ವಿದ್ಯಾರ್ಥಿಗಳು ಹಾಜರಿದ್ದರು.