ಸಸಿ ನೆಡುವ ಮತ್ತು ಸ್ವಚ್ಚತೆ ಕಾರ್ಯಕ್ರಮ


ಶಿವಮೊಗ್ಗ ಜು.21;   ಸ್ವಾತಂತ್ರ್ಯೋತ್ಸವದ 75 ನೇ ವರ್ಷಾಚರಣೆ ‘ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ’ದಡಿಯಲ್ಲಿ ಜುಲೈ 19 ರಂದು ರೈಲ್ವೇ ಇಲಾಖೆ ವತಿಯಿಂದ ಆನಂದಪುರ ರೈಲ್ವೇ ನಿಲ್ದಾಣದಲ್ಲಿ ಸಸಿ ನೆಡುವ ಹಾಗೂ ಸ್ವಚ್ಚತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೈಲ್ವೆ ಪ್ರೊಟೆಕ್ಷನ್ ಫೋರ್ಸ್‍ನ ಇನ್ಸ್‍ಪೆಕ್ಟರ್ ಬಿ.ಎನ್.ಕುಬೇರಪ್ಪ ಮತ್ತು ತಂಡದವರು ಹಾಗೂ  ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ರಾಯಲ್ ಕ್ಲಬ್ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.