ಸಸಿ ನೆಡುವ ಕಾರ್ಯಕ್ರಮ

ಬೀದರ್: ಜು.28:ತಾಲ್ಲೂಕಿನ ಕಪಲಾಪುರ (ಎ) ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಅಧ್ಯಕ್ಷೆ ಈಶ್ವರಿ ಹಣಮಂತರಾವ್ ಮೈಲಾರೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು,’ ಮಾನವನು ತನ್ನ ಐಷಾರಾಮಿ ಜೀವನ ನಡೆಸುವುದಕ್ಕಾಗಿ ಗಿಡ ಮರಗಳನ್ನು ಕಡಿಯುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ. ಪರಿಸರ ಉಳಿದರೆ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ.ಆದ್ದರಿಂದ ಪ್ರತಿಯೊಬ್ಬರು ತಮ್ಮ ಸುತ್ತಲಿನ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪಾಲನೆ ಪೆÇೀಷಣೆ ಮಾಡಬೇಕು’ ಎಂದು ತಿಳಿಸಿದರು.
ನಗರೀಕರಣದ ಪ್ರಭಾವದಿಂದ ಪರಿಸರ ನಾಶವಾಗುತ್ತಿದೆ. ನೈಸರ್ಗಿಕ ಸಂಪತ್ತು, ಜೀವ ಸಂಕುಲಗಳಿಗೆ ಆಪತ್ತು ಬಂದಿದೆ. ಇದನ್ನು ತಡೆಯಲು ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಎಲ್ಲರೂ ನಿರ್ವಹಿಸಬೇಕು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಮುಖಂಡರಾದ ಹಣ ಸತೀಶ ಸಿಕೆನಪೂರೆ, ಶಿವಕುಮಾರ ಕೊಳಾರೆ, ಎನ್ ಎಸ್ ಯು ಏ ಜಿಲ್ಲಾ ಘಟಕದ ಉಪಾಧ್ಯಕ್ಷ ಇಮ್ರಾನ್ ಖಾನ್, ಎಸ್ಡಿಎಂಸಿ ಅಧ್ಯಕ್ಷ ವೀರಶೆಟ್ಟಿ, ಮುಖ್ಯ ಶಿಕ್ಷಕಿಯರಾದ ಚಂದ್ರಕಲಾ, ಅಕ್ಬರ್ ಜಹಾ ಇದ್ದರು.