ಸಸಿ ನೆಡುವ ಕಾರ್ಯಕ್ರಮಕ್ಕೆ ಜಯಣ್ಣ ಚಾಲನೆ

ರಾಯಚೂರು,ಜು.೧೭-ಸಮುದಾಯ ಕಾಳಜಿಯಿಂದ ಸಸಿ ನೆಡುವ ಕಾರ್ಯಕ್ರಮ ನಡೆಯುತ್ತಿರುವುದು ಹಾಗೂ ಸಮುದಾಯವನ್ನು ರಕ್ಷಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ನಗರಸಭೆ ಸದಸ್ಯ ಜಯಣ್ಣ ಅವರು ಹೇಳಿದರು.
ಅವರಿಂದು ನಗರದ ಸಾಮಾಜಿಕ ಅರಣ್ಯ ವಿಭಾಗ ಅರಣ್ಯ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ವಾರ್ಡ್ ನಂಬರ್ ಎರಡರ ಮಲ್ಲಿಕಾರ್ಜುನ ಲೇಔಟ್‌ನಲ್ಲಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ನಗರದಲ್ಲಿ ಸಮುದಾಯ ನಾಗರಿಕರು ಮುಂದೆ ಬಂದು ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುತ್ತಾರೆ ಪ್ರತಿಯೊಂದು ಮನೆಯಲ್ಲಿ ಸಸಿ ನಡೆಯುವಂತ ಕೆಲಸ ಮುಂದಿನ ದಿಗಳಲ್ಲಿ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಟಿಒ ಅಧಿಕಾರಿಗಳಾದ ಕೃಷ್ಣ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳಾದ ನಾಗರಾಜ್, ಶಿವಪ್ಪ ನಾಯಕ್, ಶಂಕ್ರಪ್ಪ ನಿವೃತ್ತಿ ಎಎಸೈ, ಮಲ್ಲೇಶ್ ಮತ್ತು ಲೇಔಟಿನ ನಾಗರಿಕರು ಭಾಗವಹಿಸಿದ್ದರು.