ಸಸಿ ನೆಡುವ ಕಾರ್ಯಕ್ಕೆ ಚಾಲನೆ

ಕೋಲಾರ,ಸೆ.೨೪: ಕೋಲಾರ ತಾಲ್ಲೂಕು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಪೌಷ್ಠಿಕ ಉದ್ಯಾನವನ ನಿರ್ಮಾಣ ಯೋಜನೆಯಡಿಯಲ್ಲಿ ತಾಲ್ಲೂಕಿನ ದಿನ್ನೆಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿ ನರಸಾಪುರ ಎ.ಹೆಚ್.ನವೀನ್ ರವರು ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಎನ್.ರಾಜೇಶ್, ಮುಖ್ಯ ಶಿಕ್ಷಕರಾದ ಕೆ.ಟಿ.ನಾಗರಾಜ್, ಸಹ ಶಿಕ್ಷಕರಾದ ಎಂ.ಕೊಳ್ಳೆಪ್ಪ, ಮಲ್ಲಿಕಾಬೇಗಂ, ಯಲ್ಲಪ್ಪ, ಮಠದಪ್ಪನವರ ಶ್ರೀನಿವಾಸ್ ಹಾಜರಿದ್ದರು.