ಸಸಿ ನೆಟ್ಟು ವನ ಮಹೋತ್ಸವ ಆಚರಣೆ

ಔರಾದ :ಜು.11: ಅರಣ್ಯ ಇಲಾಖೆ ವತಿಯಿಂದ ಸ್ಥಳಿಯ ಅಮರೇಶ್ವರ ಕನ್ಯಾ ಪ್ರೌಢ ಶಾಲೆ ಆವರಣದಲ್ಲಿ ಸಸಿ ನೆಡುವ ಮೂಲಕ ವನ ಮಹೋತ್ಸವ ಆಚರಿಸಲಾಯಿತು.

ಶಾಲೆಯ ಮುಖ್ಯಗುರು ರಜನಿಗಂಧಾ ಹಮಿಲಪೂರೆ ಅವರು ಮಾತನಾಡಿ, ಸೃಷ್ಟಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಿಡ ಮರಗಳಿಲ್ಲದೇ ಕಾಲಕ್ಕೆ ಸರಿಯಾಗಿ ಮಳೆ ಬರುತ್ತಿಲ್ಲ. ಪರಿಸರ ಅಶುದ್ಧವಾಗಲು ಕಾರಣವಾಗಿದೆ. ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸಿದರೆ ಜಾಗತಿಕ ತಾಪಮಾನ ಕಡಿಮೆಯಾಗಲಿದೆ. ಆಗ ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯ ಎಂದರು. ಸುಮಾರು 50ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ವನ ಮಹೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಚನ್ನಬಸವ ಗಜರೆ, ಬಸವರಾಜ ಬಂತೆ, ಗುಂಡಪ್ಪ ಕುಂಬಾರ, ಅಶ್ವಿನಿ ವಲ್ಲೆಪುರೆ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.