ಸಸಿ ನೆಟ್ಟು ಪರಿಸರ ದಿನಾಚರಿಸಿದ ಯುವಕರು


ರಾಯಚೂರು, ಜೂ.೬- ತಾಲೂಕಿನ ಹುಣಸಿಹಾಳಹುಡಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿಗಳನ್ನು ನೆಟ್ಟು ಗ್ರಾಮದ ಆಸಕ್ತ ಯುವಕರು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು, ಪ್ರಸ್ತುತ ಪರಿಸರವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ರಾಯಚೂರಿನಂತ ಬಿಸಿಲೂರಿನಲ್ಲಿ ಗಿಡ, ಮರಗಳನ್ನು ಹೆಚ್ಚೆಚ್ಚು ಬೆಳೆಸಿದಷ್ಟು ಅನುಕೂಲ ಎಂಬ ಸಂದೇಶ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಯುವಕರಾದ ಪ್ರಭಾಕರ್ ಹುಡೇದ್, ಬಾವಸಲಿ, ಶಿವರೆಡ್ಡಿ ಓಂಕಾರಿ, ಲಿಂಗರಾಜ್, ಪ್ರಕಾಶ್ ಹಾಗೂ ದೇವರಾಜ್ ಇದ್ದರು.