ಸಸಿ ನೆಟ್ಟರೆ ಸಾಲದು, ಪೋಷಿಸಿ ಬೆಳೆಸುವುದು ಅವಶ್ಯ

ಸೈದಾಪುರ:ಜೂ.6: ಪರಿಸರ ದಿನಾಚರಣೆ ಕೇವಲ ಸಸಿ ನೆಡುವ ಕಾರ್ಯಕ್ರಮಕ್ಕೆ ಸೀಮಿತವಾಗದೆ ನೆಟ್ಟಿರುವ ಸಸಿಗಳನ್ನು ನಿರಂತರವಾಗಿ ಪೋಷಣೆ ಮಾಡುವ ಕೆಲಸ ಸಾಗಬೇಕಿದೆ ಎಂದು ಹಿರಿಯ ಮುಖಂಡ ಡಾ.ಭೀಮಣ್ಣ ಮೇಟಿ ಅಭಿಪ್ರಾಯ ಪಟ್ಟರು.
ಪಟ್ಟಣದ ಹೊರ ವಲಯದಲ್ಲಿ ಡಾ.ಭೀಮಣ್ಣ ಮೇಟಿ ಪೌಂಡೆಶನ್‍ದಿಂದ ಪರಿಸರ ದಿನಾಚರನೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿ ವರ್ಷ ಮಳೆಗಾಲದಲ್ಲಿ ಅರಣ್ಯ ಇಲಾಖೆಯಿಂದ ಲಕ್ಷಾಂತರ ಸಸಿಗಳನ್ನು ಹಾಕಲಾಗುತ್ತದೆ. ಅವುಗಳಲ್ಲಿ ಅರ್ಧದಷ್ಟು ಸಸಿಗಳನ್ನು ಪೋಷಣೆ ಮಾಡಿ ಬೆ¼ಸಿದರೆ ಪರಿಸರ ಹಸಿರಿನಿಂದ ಕಂಗೊಳಿಸುತ್ತಿತ್ತು ಆದರೆ ಪೋಷಣೆ ಇಲ್ಲದೆ ಅನೇಕ ಸಸಿಗಳು ಹಾಕಿದ ಒಂದೆರಡು ತಿಂಗಳಲ್ಲಿ ಒಣಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ವಾತವರಣದಲ್ಲಿ ಮಲಿನತೆಯನ್ನು ತಡೆಯಲು ಪರಿಸರ ಸಮತೋಲನ ಅತ್ಯಗತ್ಯವಾಗಿದ್ದು ಪ್ರತಿಯೊಬ್ಬರು ಪರಿಸರವನ್ನು ಉಳಿಸಿ ಬೆಳೆಸುವಂತ ಕಾರ್ಯಕ್ಕೆ ಕೈಜೋಡಿಸಬೇಕು ಹಾಗೂ ಸರಕಾರ ಮನೆಗೊಂದು ಮರ ಊರಿಗೊಂದು ವನ, ಕಾಡು ಬೆಳೆಸಿ ನಾಡು ಉಳಿಸಿ ಎಂಬ ಇತ್ಯಾದಿ ಘೋಷವಾಕ್ಯಗಳ ಮೂಲಕ ಸಸ್ಯ ಸಂಪತ್ತು ರಕ್ಷಣೆಗೆ ಮುಂದಾಗಿದೆ. ಪರಿಸರ ಸಂರಕ್ಷಣೆ ಎಂಬುದು ಕೇವಲ ಸರಕಾರದಿಂದ ಮಾತ್ರ ಸಾಧ್ಯವಿಲ್ಲ ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಮಾಳಪ್ಪ ಅರೀಕೇರಕರ್, ಪಿಎಸ್‍ಐ ಭೀಮರಾಯ ಬಂಕ್ಲಿ, ಪೌಂಡೆಶನ್ ಅಧಕ್ಷೆ ವಿದ್ಯಾ ಡಾ.ಭೀಮಣ್ಣ ಮೇಟಿ, ಪ್ರಭುಲಿಂಗ ವಾರದ್, ಶಿವುಕುಮಾರ ಮುನಗಲ್, ಸಿದ್ದಪ್ಪ ಪೂಜಾರಿ ಬದ್ದೇಪಲ್ಲಿ, ದಶರಥ, ಮೂರ್ತಿಜೀ, ನೀತಿನ್ ತಿವಾರಿ, ಭೀಮಣ್ಣ ಮಡಿವಾಳಕರ್, ಮಲ್ಲರೆಡ್ಡಿ ಪಾಟೀಲ್, ಲಿಂಗರೆಡ್ಡಿ ಗೊಬ್ಬೂರ್, ಸಿದ್ದಪ್ಪ ಜೇಗರ್ ಸೇರಿದಂತೆ ಇತರರಿದ್ದರು.