ಸಸಿ ನೀಡಿ ಅಭಿನಂದನೆ


ಹುಬ್ಬಳ್ಳಿ ಎ.23-: ಇಲ್ಲಿನ ಕಿಮ್ಸ್ ವೈದ್ಯರು ಕರೊನಾ 2 ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಜನರಿಗೆ ವ್ಯಾಕ್ಸಿನೇಷನ್ ಸಮರ್ಪಕವಾಗಿ ನೀಡುತ್ತಿರುವ ಹಿನ್ನೆಲೆಯಲ್ಲಿ ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಸಸಿಗಳನ್ನು ನೀಡಿ ಅಭಿನಂದಿಸಲಾಯಿತು.
ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಕರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್, ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ವ್ಯಾಕ್ಸಿನ್ ಎಲ್ಲರೂ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರೋ ಗ್ರೀನ್ ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ,ಉಪ ವೈದ್ಯಕೀಯ ಅಧೀಕ್ಷಕಿ ಡಾ. ಜಾನಕಿ ತೊರವಿ, ಕೋವಿಡ್ ನೋಡಲ್ ಅಧಿಕಾರಿ ಡಾ. ಲಕ್ಷ್ಮೀಕಾಂತ ಲೋಕರೆ, ಡಾ. ಸಚಿನ್ ಹೊಸಕಟ್ಟಿ, ಡಾ. ಮಂಜುನಾಥ ನೇಕಾರ, ಸಿಎಒ ರಾಜಶ್ರೀ ಜೈನಾಪುರ, ಪ್ರವೀಣ್ ನಾಯಕ್, ರಾಜು ರಾಜೊಳೀ, ವೃಷಬ್ ಡಂಗನವರ ಇದ್ದರು.