ಸಸಿಗಳು ಮಕ್ಕಳಂತೆ ಬೆಳೆಸಿದರೆ, ಮುಂದೊಂದು ದಿನ ಸಮಾಜದಲ್ಲಿ ಉತ್ತಮ ನಾಗರಿಕರಾಗುತ್ತಾರೆ: ಮಾಣಿಕರಾವ ಪಾಟೀಲ

ಬೀದರ, ಜು. 24 ಃ ಸೂರ್ಯ ಶಿಕ್ಷಣ ಸಂಸ್ಥೆ, ಕಲ್ಪವೃಕ್ಷ ಎನ್.ಜಿ.ಓ., ಹಾಗೂ ಸರ್ಕಾರಿ ಪ್ರೌಢ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ 75ನೇ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮಗುವಿಗೊಂದು ಮರ ಕಾರ್ಯಕ್ರಮ ಇತ್ತೀಚಿಗೆ ಬೀದರ ತಾಲೂಕಿನ ಯರನ್ನಳ್ಳಿ(ಡಿ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಮಗುವಿಗೊಂದು ಮರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೀದರ ತಾಲೂಕಾ ಪಂಚಾಯತ ಕಾರ್ಯನಿವಾಹಕ ಅಧಿಕಾರಿ ಮಾಣಿಕರಾವ ಪಾಟೀಲರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಸಸಿಗಳು ಮಕ್ಕಳಂತೆ ಬೆಳೆಸಿದರೆ, ಮುಂದೊಂದು ದಿನ ಸಮಾಜದಲ್ಲಿ ಉತ್ತಮ ನಾಗರಿಕರಾಗುತ್ತಾರೆ. ಅದೇ ರೀತಿ ಮನೆಗೊಂದು ಮರ ಬೆಳೆಸಿ, ಪರಿಸರ ಉಳಿಸುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಿದೆ ಎಂದ ಅವರು, ಬರುವ ದಿನಗಳಲ್ಲಿ ಶಾಲಾ ಮಕ್ಕಳಿಗೆ ತಾಪಂ ವತಿಯಿಂದ ಎರಡು ಸಿಸಿಗಳು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದರು.

ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ಅವರು ಮಾತನಾಡುತ್ತ, ಪರಿಸರ ರಕ್ಷಣೆಗೋಷ್ಕರ ಯರನ್ನಳ್ಳಿ ಸರ್ಕಾರಿ ಪ್ರೌಢ ಶಾಲೆಯವರು ಹಮ್ಮಿಕೊಂಡಿರುವ ಮಗುವಿಗೊಂದು ಮರ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದರು.

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 80 ರಷ್ಟು ಅಂಕ ಪಡೆದ 7 ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸ್ಕಾರ ನೀಡಿ, ಸನ್ಮಾನಿಸಲಾಯಿತು. ಗ್ರಾಮೀಣ ಭಾಗದ ಕಡು ಬಡತನದಲ್ಲಿ ಅರಳಿದ ಪ್ರತಿಭೆ ಯರನ್ನಳ್ಳಿ ಗ್ರಾಮದ ಎಂಬಿಬಿಎಸ್ ಪೂರ್ಣಗೊಳಿಸಿದ ಮಾಣಿಕೇಶ್ವರಿ ಅಶೋಕ ದೇಶಮುಖ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ನಂತರ ವಿವಿದ ಗ್ರಾಮದಿಂದ ಬಂದ ವಿದ್ಯಾರ್ಥಿಗಳಿಗೆ 150 ಸಸಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಓಂಪ್ರಕಾಶ ಧಡ್ಡೆ, ಯೆರನಳ್ಳಿ ಗ್ರಾ. ಪಂ ಅಧ್ಯಕ್ಷ ರಾಜಕುಮಾರ ಚೆಲುವಾ, ಉಪಾಧ್ಯಕ್ಷರಾದ ವಿಜಯಕುಮಾರ ಅಣಕಲೆ, ತಾಪಂ ಎಡಿ ಸಂಜೀವಕುಮಾರ, ಎಡಿ(ನರೇಗಾ)ಲಕ್ಷ್ಮೀ ಬಿರಾದಾರ, ಪಿಡಿಓ ವಿಜಯಶೀಲಾ, ಪ್ರೌಢ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಲೀಂಖಾನ, ಜನವಾಡಾ ಪಿಎಸ್‍ಐ ಶಿವರಾಜ ಪಾಟೀಲ, ಬಸಯ್ಯಾ ಸ್ವಾಮಿ, ಶೈಲೇಂದ್ರ ಕಾವಡೆ, ಮಹೇಶ ಬಾವುಗೆ, ದತ್ತು ಬಾವುಗೆ ಮತ್ತು ಭಗವಂತ ಗಾದಗೆ ಅವರು ಸೇರಿದಂತೆ ಗ್ರಾಮದ ಗಣ್ಯರು, ಮಹಿಳೆಯರು, ಮಕ್ಕಳು ಹಾಗೂ ವಿದ್ಯಾರ್ಥಿಗಳು ಇದ್ದರು.

ಕರ್ನಾಟಕ ಜಾನಪದ ಪರಿಷತ್ ತಾಲೂಕಾ ಘಟಕದ ಕೋಶಾಧ್ಯಕ್ಷರಾದ ಧನರಾಜ ಅಣಕಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಎಸ್.ಬಿ. ಕುಚಬಾಳ ನಿರೂಪಿಸಿದರು. ಆಯೋಜಕರಾದ ಮಹೇಶ ಅಣಕಲೆ ವಂದಿಸಿದರು.