ಸಸಿಗಳನ್ನು ಶಿಶುಗಳಂತೆ ಪಾಲನೆ ಪೋಷಣೆ ಮಾಡಲು‌ ಕರೆ

ರಾಯಬಾಗ:ಜು.೨೭; ತಾಲ್ಲೂಕಿನ ಹಾರೂಗೇರಿ ಪಟ್ಟಣದ ಶ್ರೀ ಮಹಾತ್ಮಾ ವಿದ್ಯಾವರ್ಧಕ ಸಂಘ(ರಿ)ಸುಮಧುರ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ಶ್ರೀ ವಿದ್ಯಾಗಂಗಾ ಪ್ರೌಢ ಶಾಲೆ ಯುನಿವರ್ಸಲ್ ಪದವಿ ಪೂರ್ವ ಮಹಾವಿದ್ಯಾಲಯ ಹಾರೂಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಕ್ರೀಡೆ ಸಾಂಸ್ಕೃತಿಕ,ವನಮಹೋತ್ಸವ, ಹಾಗೂ ಎನ್ ಎಸ್ ಎಸ್ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಮತ್ತು ಪಿ ಯು ಸಿ ಪ್ರಥಮ ವರ್ಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಇತ್ತೀಚೆಗೆ ನೆರವೇರಿತು. ಸಮಾರಂಭದ ಮುಖ್ಯ ಅತಿಥಿಗಳಾದ ಮೂಡಲಗಿಯ ಆರ್ ಡಿ ಎಸ್ ಕಲಾ ವಾಣಿಜ್ಯ ಸಮಾಜ ಕಾರ್ಯ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು ಸಾಹಿತಿಗಳಾದ ಪ್ರೋ ಟಿ ಎಸ್ ವಂಟಗೂಡಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಕನ್ನಡ ನಾಡಿನ ಕಲೆ ಸಾಹಿತ್ಯ ಕ್ರೀಡೆ ಮತ್ತು ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ತೋಟಗಳಲ್ಲಿ ಸಸಿಗಳನ್ನು ನೆಡುವುದರ ಮೂಲಕ ಸಸಿಗಳನ್ನು ಶಿಸುವಿನಂತೆ ಪೋಷಿಸಿ ಉತ್ತಮ ಆಮ್ಲಜನಕ ಹಾಗೂ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಬೇಕು. “ಶಿಕ್ಷಕರು ವಿದ್ಯಾರ್ಥಿಗಳ ಮೈ ತಟ್ಟದೆ ಮನ ಮುಟ್ಟುವಂತೆ ಭೋದಿಸಬೇಕು” ವಿದ್ಯಾರ್ಥಿಗಳು ಗುರುವಿಗೆ ವಿದೇಯರಾಗಿ ವಿದ್ಯೆ ಕಲಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು  ಅಭಿಮತ ವ್ಯಕ್ತಪಡಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸುನಂದಾತಾಯಿ ಕ. ಬೀಳಗಿ ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿಗಳಾದ ಮಾರುತಿ ಕ. ಬೀಳಗಿ ಪ್ರಾಚಾರ್ಯರಾದ ಎಲ್. ಬಿ. ಬಿ/ಪಾಟೀಲ ಮುಖ್ಯೊಪಾಧ್ಯಾಯರಾದ ವಾಯ್ ಆಯ್ ಹೊಸೂರ, ಪ್ರಧಾನ  ಗುರುಗಳಾದ ಬಿ ಕೆ ಕೊಡಗಾನೂರ, ಹಿಡಕಲ್ಲದ ಕವಿರತ್ನ ಕಾಳಿದಾಸ ಶಾಲೆಯ ಪ್ರಧಾನ ಗುರುಗಳಾದ ಬೀರಪ್ಪ ತಡಸಲೂರ, ಬೀರೇಶ್ವರ ಪ್ರೌಢಶಾಲೆಯ ಮುಖ್ಯೊಪಾಧ್ಯಾಯ ಎಸ್ ಡಿ ಹೊಸಟ್ಟಿ, ವ್ಹಿ ವಾಯ್ ನಾಯಿಕ, ಹಾಗೂ ಗುರುವೃಂದ ವಿದ್ಯಾರ್ಥಿ ವೃಂದ ಹಾಜರಿದ್ದರು. ಕಾರ್ಯಕ್ರಮವನ್ನು ಜಿ. ಆರ್. ಜಾಧವ ಸ್ವಾಗತಿಸಿದರು ಕು.ಪಿ. ಬಿ ಠಕ್ಕಣ್ಣವರ ನಿರೂಪಿಸಿದರು. ಶ್ರೀಮತಿ ಎಸ್ ಎನ್. ಪಾಟೀಲ ವಂದಿಸಿದರು.