ಸಸಿಗಳನ್ನು ತಾಯಿಯಂತೆ ಕಾಪಾಡಿ-ವಕ್ಕಲೇರಿ ರಾಜಪ್ಪ

ಕೋಲಾರ,ಜೂ.೮-ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿರುವ ಗ್ಯಾಲಕ್ಸಿ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಕಾರ್ಯದರ್ಶಿ ವಕ್ಕಲೇರಿ ರಾಜಪ್ಪ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯಂದು ಸಾಲುಮರದ ತಿಮ್ಮಕ್ಕ ಅವರ ಆದರ್ಶವನ್ನು ಪಾಲಿಸುವ ಮೂಲಕ ಪ್ರತಿಯೊಂದು ಮಗುವು ಕೂಡ ನಿಮ್ಮ ನಿಮ್ಮ ಊರುಗಳಲ್ಲಿ, ಮನೆಗಳ ಹತ್ತಿರ, ಸಸಿಗಳನ್ನು ನೆಟ್ಟು ತಾಯಿಯಂತೆ ಪ್ರೀತಿಯಿಂದ ಹಾರೈಕೆ ಮಾಡಬೇಕು. ಮುಂದಿನ ವರ್ಷ ವಿಶ್ವ ಪರಿಸರ ದಿನಾಚರಣೆಯಂದು ನಮ್ಮ ಶಾಲೆಯ ಪರವಾಗಿ ಮನೆಗೊಂದು ಗಿಡ ನೀಡುತ್ತೇವೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯನಿ ಧನಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೋಷಕರಾದ ದೇವರಾಜ್, ನಾರಾಯಣಸ್ವಾಮಿ, ಶಿಕ್ಷಕರಾದ ಪ್ರಿಯದರ್ಶಿನಿ, ಭವ್ಯ ವಿ.ಎಸ್, ದೊಮ್ಮಸಂದ್ರ ಡಾ.ನರಸಿಂಹ, ಅಭಿನಯ, ರಫೀನ್‌ತಾಜ್, ಶ್ರವಣ್‌ಕುಮಾರ್ ಸೇರಿದಂತೆ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು.