ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ

ವಿಜಯಪುರ, ಡಿ.9-ವಿಜಯಪುರ ಅಪರ ಜಿಲ್ಲಾಧಿಕಾರಿಗಳಾದ ರಮೇಶ್ ಕಳಸದ ಅವರು ಡಿ.7 ರಂದು 2021 ನೇ ಸಾಲಿನ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಇದೇ ವೇಳೆ ವಿಜಯಪುರ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರಾದ ಎಸ್ ಬಿ ಪಾಟೀಲ್ ಅವರು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಮಹತ್ವದ ಕುರಿತು ತಿಳಿಸಿ, ಸ್ವಯಂ ಪ್ರೇರಿತರಾಗಿ ದೇಣಿಗೆ ಮಾಡಬೇಕು ಎಂದು ಹೇಳಿದರು.
ಅದರಂತೆ ಅಪರ ಜಿಲ್ಲಾಧಿಕಾರ ರಮೇಶ್ ಕಳಸದ ಅವರು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಎನ್. ಡಿ ಸೂರ್ಯವಂಶಿ, ವಿಜಯ ಕುಮಾರ್ ಅಂಬಿನಭಾವಿ, ಪಿ.ಕೆ ರಾಠೋಡ, ಪ್ರವೀಣ ನಾಗಮೋತಿ, ಮೀರಾ ಐಗಳಿ, ಗುರುರಾಜ ಕುಲಕರ್ಣಿ ಸೇರಿದಂತೆ ಮಾಜಿ ಸೈನಿಕರು ಉಪಸ್ಥಿತರಿದ್ದರು.