ಸವಿತಾ ಸಮಾಜ ಬಾಂಧವರಿಗೆ ಆಹಾರ ಕಿಟ್ ವಿತರಣೆ

ಜಗಳೂರು.ಜೂ.೨; ಕೊರೋನಾ ಸಂಕಷ್ಟಗಳ ಮದ್ಯೆ ಜೀವನ ಸಾಗಿಸುವುದು ದುಸ್ತರವಾಗಿದ್ದು ಅಂತವರ ನೆರವಿಗೆ ಕೈ ಜೋಡಿಸಬೇಕಿದೆ ಎಂದು ಸಮಾಜ ಸೇವಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರುಪಟ್ಟಣದ ಅವರ ನಿವಾಸದಲ್ಲಿ ಸವಿತಾ ಸಮಾಜದ 35 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು  ಕೊರೋನಾ ಲಾಕ್ ಡೌನ್ ನಿಯಮವನ್ನ ಕಡ್ಡಾಯವಾಗಿ ಪಾಲಿಸಬೇಕು ಆದರೆ ಹೊಟ್ಟೆಪಾಡಿಗಾಗಿ ಕಟ್ಟಿಕೊಂಡ ಜೀವನದ ಬಂಡಿಸಾಗಿಸಲು ಹಲವು ವೃತ್ತಿ ಮಾಡುತ್ತಿರು ಜನರಿಗೆ ಸಮಸ್ಯೆ ಆಗಿರುವುದು ನಿಜ ಆದರೆ ಇಂತಹ ಪರಿಸ್ಥಿತಿಯನ್ನ ಎಲ್ಲರೂ ಸಹ ದೈರ್ಯದಿಂದ ಎದುರಿಸಬೇಕಿದೆ ಎಂದರು 
ಸವಿತಾ ಸಮಾಜದ ಮುಖಂಡ ಶಾಂತಪ್ಪ ಮಾತನಾಡಿ ಸರ್ಕಾರದ ಜನಪ್ರತಿನಿದಿಗಳು ಮಾಡದಂತಹ ಕೆಲಸವನ್ನ ಸಮಾಜ ಸೇವಕರಾದ ದೇವೇಂದ್ರಪ್ಪ ಮಾಡಿರುವ ಕಾರ್ಯ ಜನ ಪ್ರತಿ
ನಿದಿಗಳ ಆಡಳಿತಕ್ಕೆ ಹಿಡಿದ ಕೈಗನ್ನಡಿ ಯಾಗಿದೆ ಸವಿತಾ ಸಮಾಜ ಸಾಮಾಜಿಕ ಆರ್ಥಿಕ ಹಾಗು ಶೈಕ್ಷಣಿಕವಾಗಿ ಹಿಂದುಳಿದಿದೆ ಅಂತಹ ಸಮಾಜವನ್ನ ಗುರುತಿಸಿರು ನಿಮ್ಮ ಸೇವೆ ಮಾದರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಸವಿತಾ ಸಮಾಜದ ಅಧ್ಯಕ್ಷರು ನರಸಿಂಹ ಮೂರ್ತಿ.ಕಾರ್ಯದರ್ಶಿ ಹೊನ್ನೂರಪ್ಪ ಹಿರಿಯ ಮುಖಂಡರಾದ ಕೃಷ್ಣಮೂರ್ತಿ.ಏಕಾಂತಪ್ಪ.ಪುರಂದರ .ಮಲ್ಲಿಕಾರ್ಜುನ್. ಹೆಚ್.ಎನ್.ತಿಪ್ಪೇಸ್ವಾಮಿ. ಧನಂಜಯ ತಿಪ್ಪೇಸ್ವಾಮಿ .ಸೇರಿದಂತೆ ಹಲವರು ಇದ್ದರು