ಸವಿತಾ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜು. 9ರಂದು ಪುರಸ್ಕಾರ

ಕಲಬುರಗಿ:ಜು.05:ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜುಲೈ 9ರಂದು ಬೆಳಿಗ್ಗೆ 10-30ಕ್ಕೆ ಸವಿತಾ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸವಿತಾ ಸಮಾಜ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ಚಿನ್ನಾಕಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆಯನ್ನು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಹಾಗೂ ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ನೆರವೇರಿಸುವರು. ದಿವ್ಯ ಸಾನಿಧ್ಯವನ್ನು ಕೊಂಚೂರು ರಾಜ್ಯ ಸವಿತಾ ಪೀಠ ಮಹಾಂಸ್ಥಾನದ ಸವಿತಾನಂದನಾಥ್ ಮಹಾಸ್ವಾಮೀಜಿ ವಹಿಸುವರು ಎಂದರು.
ಅತಿಥಿಗಳಾಗಿ ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ, ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಶಶೀಲ್ ಜಿ. ನಮೋಶಿ, ಮಹಾಪೌರ ವಿಶಾಲ್ ದರ್ಗಿ, ಕರ್ನಾಟಕ ಗ್ರಾಮೀಣ ಮತ್ತು ಪಂಚಾಯಿತಿರಾಜ್ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುಕಾಂತ್ ಚಟಪಲ್ಲಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಅಜಯಕುಮಾರ್ ಎ. ದಾಮರಗಿದ್ದಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸುರೇಶ್ ಸಜ್ಜನ್, ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ತೃಪ್ತಿ ಎಸ್. ಲಾಖೆ, ಮಕ್ಕಳ ತಜ್ಞ ಡಾ. ಶರಣ್ ಎಸ್. ಧನವಾಡಕರ್, ಗಿನ್ನಿಸ್ ದಾಖಲೆ ಮಾಡಿದ ಸಂತೋಷ್ ಸೂರ್ಯವಂಶಿ ಪುಣೆ, ಸಮಾಜದ ವೈಭವ್ ಶೇಠ್, ಶರಣಬಸಪ್ಪ ಸೂರ್ಯವಂಶಿ ಅವರು ಆಗಮಿಸುವರು ಎಂದು ಅವರು ಹೇಳಿದರು.
ಸಮಾರಂಭದಲ್ಲಿ 35 ಜನ ಎಸ್‍ಎಸ್‍ಎಲ್‍ಸಿ, 25 ಜನ ಪಿಯುಸಿ, 15 ಜನ ಪದವೀಧರ ಹಾಗೂ ಹತ್ತು ಜನ ಸ್ನಾತಕೋತ್ತರ ಪದವೀಧರರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಶೇಕಡಾ 70ರಷ್ಟು ಅಂಕಗಳನ್ನು ಪಡೆದವರೆಲ್ಲರಿಗೂ ಸನ್ಮಾನಿಸಿ, ಅಭಿನಂದನಾ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಅದೂ ಅಲ್ಲದೇ ಸವಿತಾ ಸಮಾಜದ ನಿವೃತ್ತ ಹೊಂದಿರುವ ನಾಲ್ವರಿಗೆ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಸವಿತಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾರ್ಥಿಗಳು ಜುಲೈ 7ರೊಳಗೆ ಅಂಕಪಟ್ಟಿ ಜಿರಾಕ್ಸ್ ಜೊತೆಗೆ ಹಿಂದುಗಡೆ ತಮ್ಮ ವಿಳಾಸ, ಮೊಬೈಲ್ ನಂಬರ್ ಬರೆದು ರಾಜೇಂದ್ರ ಅಷ್ಟಗಿಕರ್, ಗೌರವ ಅಧ್ಯಕ್ಷರು, ರಾಮ ನಗರ, ಎಸ್.ಬಿ. ಕಾಲೇಜು ಎದುರುಗಡೆ ಮನೆ ವಿಳಾಸಕ್ಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9945731258ಗೆ ಸಂಪರ್ಕಿಸಲು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಹೇಶ್ ಉಚ್ಛೆಲೀಕರ್, ಭೀಮಣ್ಣ ದೇವದುರ್ಗ, ದೇವಿದಾಸ್ ಜಹಿರಾಬಾದಕರ್, ರಾಜಶೇಖರ್ ಮಾನೆ ಮುಂತಾದವರು ಉಪಸ್ಥಿತರಿದ್ದರು.