
ಕಲಬುರ್ಗಿ, ಜು ,12: ನಗರದ ಸವಿತಾ ಸಮುದಾಯ ಭವನದಲ್ಲಿ ಜಿಲ್ಲಾ ಯುವಕ ಸಂಘದ ಜಿಲ್ಲಾಧ್ಯಕ್ಷರಾದ ಆನಂದ ವಾರಿಕ ಅವರ ನೇತೃತ್ವದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 90% ಕ್ಕಿಂತಲೂ ಹೆಚ್ಚಿನ ಅಂಕ ಪಡೆದ 20 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ನೀಟ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಕು ಸ್ವಾತಿ ಶ್ರೀನಿವಾಸ ನಾಲವಾರ ಅವರು ವಿಶೇಷ ಅಹ್ವಾನೀತರಾಗಿದ್ದು ವಿಶೇಷವಾಗಿತ್ತು ಶೈಕ್ಷಣಿಕವಾಗಿ ಸಧೃಡರಾಗಲು ಶಿಕ್ಷಣ ಮುಖ್ಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಪ್ರತಿ ವರ್ಷ ಇನ್ನೂ ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕೆಂದು ಸ್ಪೂರ್ತಿ ತರಲು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದೇವೆ ಸಮಾಜದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಧ್ಯಾಭ್ಯಾಸಕ್ಕೆ ಸವಿತಾ ಅಭಿವೃದ್ಧಿ ನಿಗಮಕ್ಕೆ ವಿಧ್ಯಾನಿಧಿ ಯೋಜನೆ ಅಡಿಯಲ್ಲಿ ಹೆಚ್ಚಿನ ಅನುದಾನ ಘೋಷಣೆ ಮಾಡಬೇಕೆಂದು ಯುವಕ ಸಂಘದ ಜಿಲ್ಲಾಧ್ಯಕ್ಷ ಆನಂದ ವಾರಿಕ ಪ್ರಾಸ್ತಾವಿಕವಾಗಿ ಮಾತನಾಡಿದರು ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಗಣೇಶ ಚಿನ್ನಾಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಲ್ಲಣ್ಣ ಗೋಗಿ ರಾಜೇಂದ್ರ ಅಸ್ಟೀಕರ ಶರಣಬಸಪ್ಪ ವೈದ್ಯ ಶ್ರಿನಿವಾಸ ನಾಲವಾರ ಮಹೇಶ ಉಜ್ಜಲೀಕರ ಮುಖಂಡರಾದ ಅಶೋಕ್ ಡೈಮಂಡ್ ಮಲ್ಲಿಕಾರ್ಜುನ ಮಾನೆ ಅಶೋಕ್ ಮಾನೆ ಯುವಕ ಸಂಘದ ಪದಾಧಿಕಾರಿಗಳಾದ ಮಹೇಶ ಪಾಣೆಗಾಂವ ವಿದ್ಯಾಸಾಗರ ಹಾಬಾಳ ಅಂಬರೀಷ್ ಇಟಗಾ ಬಸವರಾಜ ಕೆರಿಅಂಬಲಗಾ ಬಸವರಾಜ ಕವನಳ್ಳಿ ಸಂಜಯ ಕವನಳ್ಳಿ ಸಚೀನ ಶ್ರೀಮಂಗಲೆ ಗುಂಡು ಅಣಕಲ್ ಅಂಬಣ್ಣ ಕಾಳಗಿ ಬಸವರಾಜ ಬೀರನಳ್ಳಿ ಅನೇಕರು ಉಪಸ್ಥಿತರಿದ್ದರು.