ಸವಿತಾ ಸಮಾಜದಲ್ಲಿ ಒಂದೇ ಸಂಘ: ಬೇರೆ ಸಂಘ ಆಸ್ತಿತ್ವದಲ್ಲಿಲ್ಲ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಜು.07:-ಸವಿತಾ ಸಮಾಜ ಅಥವ ನಯನಜ ಕ್ಷತ್ರಿಯ ಸಮಾಜಕ್ಕೆ ತಾಲೂಕಿನಲ್ಲಿ ಒಂದೇ ಸಂಘವಿದ್ದು,ಸಮಾಜಕ್ಕೆ ಸೇರಿದ ಬೇರೆ ಯಾವುದೇ ಸಂಘಸಂಸ್ಥೆಗಳು ಅಸ್ತಿತ್ವದಲ್ಲಿ ಇಲ್ಲ ಎಂದು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ನಾಗೇಂದ್ರ ತಿಳಿಸಿದರು.
ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇತ್ತೀಚಿಗೆ ಸವಿತಾ ಸಮಾಜದ ಟೌನ್ ಸಂಘ ಮತ್ತು ಹೋಬಳಿ ಒಕ್ಕೂಟ ಎಂದು ಹೇಳಿಕೊಂಡು ಹಲವರು ಓಡಾಡುತ್ತಿದ್ದು,
ತಾಲೂಕಿನಲ್ಲಿ ನಯನಜ ಕ್ಷತ್ರಿಯ ಅಥವ ಸವಿತಾ ಸಮಾಜದ ಸಂಘ ಒಂದೇ ಇದ್ದು,ನಮ್ಮ ಸಮಾಜಕ್ಕೆ ಸೇರಿದ ಬೇರೆ ಯಾವುದೇ ಸಂಘವು ಅಸ್ಥಿತ್ವದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹಲವರು 30ವರ್ಷಗಳ ಕಾಲ ಸಂಘವನ್ನು ಬೆಳೆಸಿಕೊಂಡು ಬಂದಿದ್ದೇವೆ.ಸಮಾಜದ ಏಳಿಗೆಗಾಗಿ ಸರ್ಕಾರದಿಂದ ಹಲವು ಸೌಲಭ್ಯಗಳನ್ನು ತಂದಿದ್ದೇವೆ.ಕಷ್ಟಕರ ಪರಿಸ್ಥಿತಿಯಲ್ಲಿ ಜನಾಂಗಕ್ಕಾಗಿ ಹೋರಾಟ ಮಾಡಿ ಸಂಘದ ಅಸ್ತಿತ್ವವನ್ನು ಉಳಿಸಿಕೊಂಡಿದ್ದೇವೆ.ಊರೂರು ಸುತ್ತಿ ವಂತಿಗೆಯನ್ನು ಪಡೆದು ಸಮಾಜಕ್ಕಾಗಿ ಸಮುದಾಯ ನಿರ್ಮಾಣ ಮಾಡಿದ್ದೇವೆ.ಅಧ್ಯಕ್ಷರಾದ ದಿನದಿಂದ ಸಮಾಜಕ್ಕಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಈ.ರಾಜು ಮಾತನಾಡಿ,1987ರಲ್ಲಿ ಸ್ಥಾಪನೆಗೊಂಡ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.ಹಾಗಾಗಿ ತಾಲೂಕಿನಲ್ಲಿ ಸಮಾಜಕ್ಕೆ ಸೇರಿದ ಬೇರೆ ಯಾವುದೇ ಒಕ್ಕೂಟವಿಲ್ಲ.ತಾಲೂಕಿನಲ್ಲಿ ಸಮಾಜಕ್ಕೆ ಸೇರಿದ ಯಾವುದೇ ಪ್ರತ್ಯೇಕ ಸಂಘವಿಲ್ಲ.ಸಮಾಜದ ಕೆಲ ವ್ಯಕ್ತಿಗಳು ಸಮಾಜದ ವ್ಯಕ್ತಿಗಳನ್ನು ದಿಕ್ಕುತಪ್ಪಿಸುತ್ತಿದ್ದು ,ಇಂತಹ ಸುಳ್ಳು ವದಂತಿಗಳಿಗೆ ಜನರು ಕಿವಿಗೊಡಬೇಕಿಲ್ಲ.ಸಮಾಜದ ಸಂಘಟನೆಯನ್ನು ಲಾಭದಾಯಕವಾಗಿ ಬಳಸಿಕೊಳ್ಳಲು ಚುನಾವಣೆ ಸಮಯದಲ್ಲಿ ಮಾತ್ರ ಕೆಲವು ವ್ಯಕ್ತಿಗಳು ಜಾಗೃತಗೊಳ್ಳುತ್ತಿರುವುದು ಸಮಾಜದ ಮರ್ಯಾದೆಯನ್ನು ಹಾಳು ಮಾಡುತ್ತದೆ ಎಂದರು.