ಸವಿತಾ ಸಮಾಜಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡಿ

ಬೀದರ್: ಜು.11:ನಗರದ ಶಹಾಪುರ ಗೇಟ್ ಸಮೀಪದ ಹಳ್ಳದಕೇರಿಯ ಸರ್ವೇ ಸಂಖ್ಯೆ 85, 86/1 ರಲ್ಲಿ ಸವಿತಾ ಸಮಾಜಕ್ಕೆ ಶವ ಸಂಸ್ಕಾರಕ್ಕೆ ಎರಡು ಎಕರೆ ಭೂಮಿ ಮಂಜೂರು ಮಾಡಬೇಕು ಎಂದು ಬಹುಜನ ಸಮಾಜ ಪಕ್ಷ ಹಾಗೂ ಸವಿತಾ (ನಾವ್ಹಿ) ಸಮಾಜ ಆಗ್ರಹಿಸಿವೆ.

ಪಕ್ಷ ಹಾಗೂ ಸಮಾಜದ ಪದಾಧಿಕಾರಿಗಳು ನಗರದಲ್ಲಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಅವರಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.

ಸವಿತಾ ಸಮಾಜಕ್ಕೆ ಸರ್ಕಾರ ಈವರೆಗೆ ಸ್ಮಶಾನ ಭೂಮಿ ಮಂಜೂರು ಮಾಡಿಲ್ಲ. ಸ್ಮಶಾನ ಭೂಮಿ ಇಲ್ಲದ ಕಾರಣ ಸಮಾಜದವರು ತೊಂದರೆ ಅನುಭವಿಸಬೇಕಾಗಿದೆ ಎಂದು ಅಳಲು ತೋಡಿಕೊಂಡರು.

ಬಹುಜನ ಸಮಾಜ ಪಕ್ಷದ ಬೀದರ್ ನಗರ ಘಟಕದ ಅಧ್ಯಕ್ಷ ದತ್ತಪ್ಪ ಶ್ರೀಮಂಗಲೆ, ಸವಿತಾ (ನಾವ್ಹಿ) ಸಮಾಜದ ನಗರ ಘಟಕದ ಅಧ್ಯಕ್ಷ ರಾಜು ಘೋಡಂಪಳ್ಳಿ, ಪ್ರಧಾನ ಕಾರ್ಯದರ್ಶಿ ಮಾಣಿಕ ಆರ್. ಚಿನಿಮಿಶ್ರೀ, ಮಾಣಿಕ ವಡ್ಡಿಕರ್, ರಾಜಕುಮಾರ ಘೋಡಂಪಳ್ಳಿ, ಅಂಬಾದಾಸ ಮೋರ್ಗಿಕರ್ ಇದ್ದರು.