ಸವಿತಾ ಮಹರ್ಷಿ ಜಯಂತ್ಯೋತ್ಸವ

ಕಲಬುರಗಿ:ಫೆ.14:ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಫೆಬ್ರವರಿ 16ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಸವಿತಾ ಮಹರ್ಷಿ ಜಯಂತ್ಯೋತ್ಸವ ಆಚರಿಸಲಾಗುವುದು ಎಂದು ಗಣೇಶ್ ಚನ್ನೂಕರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವ್ಯ ಸಾನಿಧ್ಯವನ್ನು ಕೊಂಚುರು ಸವಿತಾ ಪೀಠದ ಸವಿತಾನಂದನಾಥ್ ಸ್ವಾಮೀಜಿ, ಘನ ಉಪಸ್ಥಿತಿಯನ್ನು ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ, ಗೌರವ ಉಪಸ್ಥಿತಿಯನ್ನು ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಹೊಂದುವರು ಎಂದರು.
ಉದ್ಘಾಟನೆಯನ್ನು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಹಾಗೂ ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್, ಕರ್ನಾಟಕ ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಕನೀಜ್ ಫಾತೀಮಾ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ವಹಿಸುವರು ಎಂದು ಅವರು ಹೇಳಿದರು.
ಅತಿಥಿಗಳಾಗಿ ಸಂಸದ ಡಾ. ಉಮೇಶ್ ಜಾಧವ್, ಶಾಸಕರಾದ ಎಂ.ವೈ. ಪಾಟೀಲ್, ಬಸವರಾಜ್ ಮತ್ತಿಮೂಡ್, ಡಾ. ಅವಿನಾಶ್ ಜಾಧವ್, ಸುನೀಲ್ ವಲ್ಲ್ಯಾಪೂರ್, ಶಶೀಲ್ ಜಿ. ನಮೋಶಿ, ಡಾ. ಬಿ.ಜಿ. ಪಾಟೀಲ್, ಡಾ. ಚಂದ್ರಶೇಖರ್ ಪಾಟೀಲ್ ಹುಮ್ನಾಬಾದ್, ಡಾ. ತಳವಾರ್ ಸಾಬಣ್ಣ, ತಿಪ್ಪಣ್ಣಪ್ಪ ಕಮಕನೂರ್, ವಿಶೇಷ ಆಹ್ವಾನಿತರಾಗಿ ಪ್ರಾದೇಶಿಕ ಆಯುಕ್ತ ಕೃಷ್ಣಬಾಜಪೇಯಿ, ಈಶಾನ್ಯ ವಲಯ ಪೋಲಿಸ್ ಉಪ ಮಹಾನಿರೀಕ್ಷಕ ಅಜಯ್ ಹಿಲೋರಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಎಂ. ಸುಂದರೇಶ್‍ಬಾಬು, ಶಾಲಾ ಶಿಕ್ಷಣ ಇಲಾಖೆಯ ವಿಭಾಗದ ಅಪರ ಆಯುಕ್ತ ಡಾ. ಆಕಾಶ್, ಸವಿತಾ ಮಹರ್ಷಿ ಸಮಾಜದ ಅಧ್ಯಕ್ಷ ಶರಣಬಸಪ್ಪ ಎಂ. ಸೂರ್ಯವಂಶ ಅವರು ಆಗಮಿಸುವರು. ಸಹಾಯಕ ಪ್ರಾಧ್ಯಾಪಕ ಡಾ. ನಾಗಪ್ಪ ಟಿ. ಗೋಗಿ ಅವರು ವಿಶೇಷ ಉಪನ್ಯಾಸ ನೀಡುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಮತಿ ಜ್ಯೋತಿ ಅಡಿಕಿ, ಸೂರ್ಯಕಾಂತ್ ಜಿ., ಪ್ರಭಾಕರ್ ಎ. ಪದ್ದರಪೇಟ್, ಪ್ರಭು ಸಿ. ಮದ್ದೂರು, ಶಿವಶರಣಪ್ಪ ಎಚ್. ಚಿಂಚೋಳಿ, ಶಾಂತು ಎಂ. ಚನ್ನೂರಾ, ನಾಗಪ್ಪ ಪದ್ದರಪೇಟ್ ಅವರು ಉಪಸ್ಥಿತರಿದ್ದರು.