ಸವಿತಾ ಮಹರ್ಷಿ ಜಯಂತಿ ಭಾವಚಿತ್ರ ಮೆರವಣಿಗೆ

ರಾಯಚೂರು, ಫೆ- ೨೮ – ರಾಯಚೂರು ತಾಲೂಕಿನ ದೇವಸುಗೂರು ಗ್ರಾಮದಲ್ಲಿ ಸವಿತಾ ಮಹರ್ಷಿ ಜಯಂತೋತ್ಸವ ಕಾರ್ಯಕ್ರಮ ವಿಜ್ರಮಣೆಯಿಂದ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಸೂಗುರೇಶ್ವರ ದೇವಸ್ಥಾನ ಹತ್ತಿರ ಸವಿತಾ ಮಹರ್ಷಿ ಭಾವಚಿತ್ರಗೆ ಮಾಜಿ ಶಾಸಕ ತಿಪ್ಪರಾಜ್ ಜವಲ್ದಾರ್ ಪೂಜೆ ಸಲ್ಲಿಸಿ ನಂತರ ಶ್ರೀ ದೇವಸುಗೂರೇಶ್ವರ ದೇವಸ್ಥಾನದಿಂದ ಭಾವಚಿತ್ರದ ಮೆರವಣಿಗೆಯನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಸೂಗುರೇಶ್ವರ ದೇವಸ್ಥಾನದಿಂದ ಹೊರಟ ಎರಡನೇ ಕ್ರಾಸ್ ದಿಂದ ಪೊಲೀಸ್ ಠಾಣೆ ಮಾರ್ಗವಾಗಿ ಕಾರ್ಯಕ್ರಮ ಬಸವಕಲ್ಯಾಣ ಮಂಟಪ ನಡೆಯಿತು.ವಿವಿಧ ಕಲಾವಿದರಿಂದ ಆಕರ್ಷಕ ನೃತ್ಯ ಪ್ರದರ್ಶನ ಜರುಗಿತು.
ಮೆರವಣಿಗೆಯಲ್ಲಿ ಶಶಿಕಲ ಭೀಮರಾಯ ಪ್ರಕಾಶ್ ಹೋಬಳಿ ಅಧ್ಯಕ್ಷ ಭೀಮಣ್ಣ ತಾಲೂಕು ಅಧ್ಯಕ್ಷ ಗುಂಜಳ್ಳಿ ಭೀಮೇಶ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಇಟಗಿ ರಾಜ್ಯ ಮಹಿಳಾ ಅಧ್ಯಕ್ಷರಾದ ಸುಮಾ ಗಸ್ತಿ ಜಿಲ್ಲಾಧ್ಯಕ್ಷ ವಿಜಯ್ ಭಾಸ್ಕರ್ ಇಟಿಗಿ ವಿಭಾಗ್ಯ ಕಾರ್ಯದರ್ಶಿ ವಲ್ಲೂರು ವೆಂಕಟೇಶ್ ನಗರ ಅಧ್ಯಕ್ಷ ವಿ ಗೋವಿಂದ ಉರುಕುಂದಿ ಎಸ್ ಅನಿಲ್
ಗೋಪಾಲ್ ವಡವಟ್ಟಿ ಅಶೋಕ್ ಡಿ ಸುರೇಶ್ ಭೀಮಣ್ಣ ಮಲ್ಲೇಶ್ ರಮೇಶ್ ಸುರೇಶ್ ದಿನೇಶ್ ಆಂಜನೇಯ ಗ್ರಾಮದ ವಿವಿಧ ಪಕ್ಷಗಳ ಮುಖಂಡರು ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.