ಸವಿತಾ ಮಹರ್ಷಿ ಜಯಂತಿ ಕಡ್ಡಾಯವಾಗಿ ಆಚರಿಸಲು ವಾರಿಕ ಮನವಿ

ಕಲಬುರ್ಗಿ, ಫೆ, 08,: ಫೆಬ್ರವರಿ 16 ರಥಸಪ್ತಮಿಯಂದು ಸವಿತಾ ಮಹರ್ಷಿ ಜಯಂತಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸಲು ಜಿಲ್ಲಾಡಳಿತ ತಾಲೂಕಾಡಳಿತ ಆದೇಶ ಹೊರಡಿಸಬೇಕು ನಂದರು ಮೌರ್ಯರು ಕಲಚೂರಿ ವಂಶಸ್ಥರ ಇತಿಹಾಸ ಹೊಂದಿರುವ ಸವಿತಾ ಸಮಾಜದ ಸವಿತಾ ಮಹರ್ಷಿ ಅವರ ಇತಿಹಾಸವನ್ನು ಶಾಲಾ ಕಾಲೇಜುಗಳಲ್ಲಿ ಜಯಂತಿ ಆಚರಣೆಯಷ್ಟೆ ಅಲ್ಲ ಇತಿಹಾಸವನ್ನು ಮಕ್ಕಳಿಗೆ ತಿಳಿಸಲು ಶಿಕ್ಷಣ ಇಲಾಖೆ ಆದೇಶಿಸಬೇಕು ಜಯಂತೋತ್ಸವ ಆಚರಣೆಗೆ ಸರ್ಕಾರದ ಅನುದಾನವಿದ್ದರೂ ನೂತನ ತಾಲೂಕುಗಳಲ್ಲಿ ಪ್ರತಿ ಬಾರಿಯೂ ಸ್ವತಃ ಖರ್ಚಿನಲ್ಲಿ ಜಯಂತೋತ್ಸವ ಆಚರಣೆ ಮಾಡುತ್ತಿದ್ದೇವೆ.ಕಮಲಾಪುರ ಪಟ್ಟಣದಲ್ಲಿ ಪ್ರತಿ ವರ್ಷ ಜಯಂತೋತ್ಸವ ಆಚರಣೆಯೊಂದಿಗೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದ್ದು ಈ ಬಾರಿ ಉಚಿತ ಆರೋಗ್ಯ ತಪಾಸಣಾ ಶಿಬಿರದೊಂದಿಗೆ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮದ್ದೂರ, ವಿಜಯಕುಮಾರ ಗದವಾಲ ಅವರಿಂದ ಉಚಿತ ಈ ಶ್ರಮ ಕಾರ್ಡ್ ಹಾಗೂ ವಿಶ್ವಕರ್ಮ ಯೋಜನೆಯ ನೊಂದಣಿಯನ್ನು ಶಿಬಿರವನ್ನು ಹಮ್ಮಿಕೊಳ್ಳುತ್ತಿದ್ದು ತಾಲ್ಲೂಕಿನ ಸಾರ್ವಜನಿಕರು ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿಭಾಗೀಯ ಕಾರ್ಯದರ್ಶಿ ಕಲಬುರಗಿ ಜಿಲ್ಲಾ ಸವಿತಾ ಸಮಾಜ ಯುವಕ ಸಂಘದ ಜಿಲ್ಲಾಧ್ಯಕ್ಷ ಸವಿತಾ ಸಮಾಜದ ಕಮಲಾಪುರ ತಾಲ್ಲೂಕು ಅಧ್ಯಕ್ಷ ಆನಂದ ವಾರಿಕ ಮನವಿ ಮಾಡಿದ್ದಾರೆ ಇದೆ ಸಂದರ್ಭದಲ್ಲಿ ಸಚೀನ ಶ್ರೀಮಂಗಲೆ ಬಸವರಾಜ ಕವನಳ್ಳಿ ಸಂಜಯ ಕವನಳ್ಳಿ ಪ್ರಕಾಶ್ ಕಲಕೋರಾ ರೇವಣಸಿದ್ದಪ್ಪ ಮಹಾಗಾಂವ ಅಂಕುಶ ಲಾಡಮುಗಳಿ ರಾಹುಲ್ ಹರಕಂಚಿ ಯುವಕ ಸಂಘದ ಮಹೇಶ ಪಾಣೆಗಾಂವ ವಿದ್ಯಾಸಾಗರ ಹಾಬಾಳ ಅಂಬರೀಷ್ ಇಟಗಾ ಅನೀಲಗೋಗಿ ಬಸವರಾಜ ಕೆರಿಅಂಬಲಗಾ ಕಿರಣ್ ಕುಮಾರ್ ಚಿಕಲಿಕರ್ ನರಸಿಂಹಲು ಅಡಕಿ ಭೋಜರಾಜ ಕುಲಕುಂದಾ ಉಪಸ್ಥಿತರಿದ್ದರು.