ಸವಿತಾ ಗಿರಿ ಅವರಿಗೆ ಸನ್ಮಾನ

ಕಲಬುರಗಿ,ಮಾ.20-ಅಧಿವಕ್ತ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಜಿಲ್ಲಾ ಘಟಕ ಮತ್ತು ಶೇಠ ಶಂಕರಲಾಲ್ ಲಾಹೋಠಿ ಕಾನೂನು ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ 25 ವರ್ಷ ವಕೀಲಿ ವೃತ್ತಿ ಪೂರೈಸಿದ ಮಹಿಳಾ ನ್ಯಾಯವಾದಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವ್ಹಿ.ಶ್ರೀಶಾನಂದ ಅವರು 25 ವಕೀಲಿ ವೃತ್ತಿ ಪೂರೈಸಿದ ಮಹಿಳಾ ನ್ಯಾಯವಾದಿಗಳು ಮತ್ತು ಶೇಠ ಶಂಕರಲಾಲ್ ಲಾಹೋಠಿ ಕಾನೂನು ಮಹಾವಿದ್ಯಾಲಯದ ಮೊದಲ ಮಹಿಳಾ ಪ್ರಂಶುಪಾಲರಾದ ಸವಿತಾ ಗಿರಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಅಧಿವಕ್ತ ಪರಿಷತ್ ಜಿಲ್ಲಾ ಅಧ್ಯಕ್ಷ ಸತ್ಯನಗೌಡ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ನಾಗಶ್ರೀ, ಕಲಬುರಗಿ ಬಾರ್ ಅಸೋಶಿಯೇಷನ್ ಅಧ್ಯಕ್ಷ ಗುಪ್ತಲಿಂಗ ಪಾಟೀಲ,ಅಧಿವಕತ್ತ ಪರಿಷತ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯೆ ಹೇಮಾ ಕುಲಕರ್ಣಿ, ಮಹಿಳಾ ಪ್ರಮುಖರಾದ ವಿಜಯಲಕ್ಷ್ಮೀ ಯರಗೋಳ ಅತಿಥಿಗಳಾಗಿ ಆಗಮಿಸಿದ್ದರು. ಪ್ರಧಾನ ಕಾರ್ಯದರ್ಶಿ ಇಂದುಧರ ಜಾಧವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.