ಸವಿತಾ ಅಭಿವೃದ್ಧಿ ನಿಗಮಕ್ಕೆ ವಾರಿಕ ನೇಮಕ ಮಾಡಲಿ

ಕಲಬುರ್ಗಿ,ಫೆ,29: ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಉಧ್ಯೋಗಿಕವಾಗಿ ರಾಜಕೀಯವಾಗಿ ಅತಿ ಹಿಂದುಳಿದ ವರ್ಗಗಳ ಪೈಕಿ ಅತಿ ಹಿಂದುಳಿದ ಸಮುದಾಯ ಸವಿತಾ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯ ವಿಭಾಗೀಯ ಕಾರ್ಯದರ್ಶಿ ಕಲಬುರಗಿ ಜಿಲ್ಲಾ ಸವಿತಾ ಸಮಾಜ ಯುವಕ ಸಂಘದ ಜಿಲ್ಲಾಧ್ಯಕ್ಷ ಆನಂದ ವಾರಿಕ ಕಲಬುರಗಿ ಅವರಿಗೆ ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ಐ ಟಿ ಬಿಟಿ ಸಚಿವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಪ್ರಿಯಾಂಕ ಖರ್ಗೆ ಜೀ ಅವರಿಗೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ ಜೀ ಅವರಿಗೆ ಹಾಗೂ ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಜಗದೇವ ಗುತ್ತೇದಾರ ಅವರಿಗೆ ಸಮಾಜ ಸೇವಕ ನರಸಿಂಹಲು ಅಡಕಿ ಮನವಿ ಮಾಡಿದ್ದಾರೆ ಇದೆ ಸಂದರ್ಭದಲ್ಲಿ ಮಹೇಶ ಪಾಣೆಗಾಂವ ವಿದ್ಯಾಸಾಗರ ಹಾಬಾಳ ಅಂಬರೀಷ್ ಇಟಗಾ ಗುಂಡು ಅಣಕಲ್ ಅನೀಲಕುಮಾರ ಗೋಗಿ ಪ್ರಕಾಶ್ ಹುಣಸಿಗೇರಾ ಕಿರಣ್ ಕುಮಾರ್ ಚಿಕಲಿಕರ್ ಬಸವರಾಜ ಕವನಳ್ಳಿ ಸಂಜಯ ಕವನಳ್ಳಿ ಸಚೀನ ಶ್ರೀಮಂಗಲೆ ಉಪಸ್ಥಿತರಿದ್ದರು.