ಸವಾಲಿಗೆ ಪಲಾಯನ‌ ಮಾಡಿದರೆ ಶಾಸಕರು ಬಹಿರಂಗ ಕ್ಷಮೆ ಕೇಳಬೇಕು; ಹೆಚ್.ಪಿ ರಾಜೇಶ್


ಜಗಳೂರು.ನ.೭;  ನನ್ನ ಆಸ್ತಿ  ಹಾಗು ಕ್ಷೇತ್ರದ ಅಭಿವೃದ್ದಿ ಬಗ್ಗೆ ಬಹಿರಂಗ ಚರ್ಚೆಗೆ ಅಹ್ವಾನ ಮಾಡಿರುವ ಶಾಸಕ ಎಸ್.ವಿ.ರಾಮಚಂದ್ರ ಅವರ ಸವಾಲುಗಳನ್ನ ಸ್ವೀಕರಿಸಿದ್ದು ಅವರೇ ದಿನಾಂಕ ಸ್ಥಳ ನಿಗದಿಮಾಡಿ ಯಾವ ಸ್ಥಳಕ್ಕೂ ಕರೆದರೂ  ದಾಖಲೆ ಸಮೇತ ಬರಲು ಸಿದ್ದವಿದ್ದೇನೆ ಈ ಸವಾಲಿಗೆ ಪಲಾಯನ‌ ಮಾಡಿದರೆ  ಶಾಸಕರು ಬಹಿರಂಗ ಕ್ಷಮೆ ಕೇಳಬೇಕು ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಅವರು ಪ್ರತಿ ಸವಾಲು ಹಾಕಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು. ಕಳೆದ ನವಂಬರ್1 ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ನನ್ನ ಆಸ್ತಿ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಹಾಕಿರುವ ಶಾಸಕರ  ಸವಾಲು ಸ್ವೀಕರಿಸಿದ್ದೇನೆ ನಾನು ಜಗಳೂರು ಕ್ಷೇತ್ರದ ಬಿದರಿಕೆರೆ ಗ್ರಾಮದ ರೈತರ ಮಗನಾಗಿ ಅವಿಭಕ್ತ ಕುಟುಂಬದಲ್ಲಿ ಜೀವನ ಮಾಡುತ್ತಿದ್ದೇನೆ ನನ್ನ ಹೆಸರಿನಲ್ಲಿ ಒಂದು ಕಾರು ಇದೆ ಐದು ವರ್ಷ ಶಾಸಕರಾದರು ಸಹ ಒಂದು ಮನೆಯನ್ನು ಕಟ್ಟಲಾಗಿಲ್ಲ ಇಂದಿಗೂ ನನ್ನ ಕುಟುಂಬದವರೂ ಬಸ್ ನಲ್ಲಿ ಹೋಡಾಟ ಮಾಡುತ್ತಿದ್ದಾರೆ ಅನಾರೋಗ್ಯದ ನಿಮ್ಮಿತ್ತ ಚಿಕಿತ್ಸೆಗಾಗಿ ದಾವಣಗೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮಗನೊಂದಿಗೆ ವಾಸವಿದ್ದೇನೆ ನಿನ್ನಂತೆ ಐಶಾರಾಮಿ ಬಂಗಲೆಯಲ್ಲಿ ವಾಸವಾಗಿಲ್ಲ ಎಂದು ತಿರುಗೇಟು ನೀಡದರು ಶಾಸಕ ಎಸ್.ವಿ.ರಾಮಚಂದ್ರ 2008 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದಾಗ 20 ಕೋಟಿ ಹಣ ಪಡೆದು ಪಕ್ಷಾಂತರ ಮಾಡಿದರು ಮೂರು ಬಾರಿ ಶಾಸಕರಾಗಿ ಬೆಂಗಳೂರು ನಲ್ಲಿ ದಾವಣಗೆರೆಯಲ್ಲಿ ಎಷ್ಟು ಆಸ್ತಿ ಅಂತಸ್ತು ಮಾಡಿದ್ದಾರೆ  ಅವರ ಮತ್ತು ಅವರ ಕುಟುಂಬ ವರ್ಗದವರ ಹೆಸರಿನಲ್ಲಿ ಎಷ್ಟು ಕಾರು.ಬಂಗಲೆ.ಆಸ್ತಿ ಇದೆ  ಎಂಬುದರ ಬಗ್ಗೆ ನನಗೂ ಮಾಹಿತಿ ಇದೆ ನೀವು ಕೇಳಿದ ಜಾಗದಲ್ಲಿಯೇ ಚರ್ಚೆಗೆ ಬರುತ್ತೇನೆ ದಿನಾಂಕ ನಿಗದಿಮಾಡಿ ಪಲಾಯನವಾದ ಮಾಡಬೇಡಿ   ನನ್ನ ಆಸ್ತಿಯ ಬಗ್ಗೆ ಅನುಮಾನ ವಿದ್ದರೆ ಕಳೆದ‌ ವಿಧಾನ ಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಆಸ್ತಿ ಘೋಷಣೆ ಮಾಡಿಕೊಂಡಿದ್ದೇನೆ ಶಾಸಕರು ಬೇಕಿದ್ದರೆ ಪ್ರತಿ ತೆಗೆದುಕೊಂಡು ಪರೀಕ್ಷಿಸಲಿ ಎಂದರು.    ತಾಲ್ಲೂಕು ಆಡಳಿತ ಸಂಪೂರ್ಣವಾಗಿ ಕುಸಿತವಾಗಿದೆ ಶಾಸಕರ ಪರಸ್ಟೇಂಜ್ ಕಾಟದಿಂದ ಅದಿಕಾರಿಗಳು ರೋಸಿಹೋಗಿ ಅವರು ಸಹ ಕಳ್ಳದಾರಿ ಹಿಡಿದು ಲೋಕಯುಕ್ತ ಬಲಿಗೆ ಬೀಳುತ್ತಿದ್ದಾರೆ ಎಸ್ಟಿ ನಿಗಮದ ಅಧ್ಯಕ್ಷರಾಗಿ ವಿಧಾನ ಸಭಾ ಕ್ಷೇತ್ರಕ್ಕೆ ನಯಾ ಪೈಸಾ ಅನುದಾನ  ನೀಡದೆ ಗುಟ್ಟಾಗಿ ಮಾಧ್ಯಮದವರ ಕಣ್ಣು ತಪ್ಪಿಸಿ ಅರಣ್ಯ ಪ್ರದೇಶದಲ್ಲಿ ಚೌಡಮ್ಮದೇವಿ ಸನ್ನಿದ್ದಿಯಲ್ಲಿ ರಾಜ್ಯ ಜಿಲ್ಲಾ ಮಟ್ಟದ ಎಸ್ಟಿ ನಿಗಮದ ಅಧಿಕಾರಿಗಳನ್ನ ಕರೆಸಿ   ಭ್ರಷ್ಟಾಚಾರ ಮಾಡಿದ್ದಾರೆ  ಎಂಟು ಕೋಟಿ ವೆಚ್ಚದ ಹೈಮಾಸ್ಟ್ ದೀಪ ಅಳವಡಿಸುವ ಯೋಜನೆಯಲ್ಲಿ .ವಿಂಡ್ ಪ್ಯಾನ್ ಅಳವಡಿಕೆಗೆ ವ್ಯಾಪಕವಾಗಿ ಜಮೀನುಗಳ ಮಾರಾಟ ಮಾಡಿ ಸರ್ಕಾರಕ್ಕೆ ಆದಾಯ ಒದಗಿಸದೇ ಶಾಸಕರು‌ ಮದ್ಯವರ್ತಿಗಳನ್ನ ಬಿಟ್ಟು ಹವಾಲ ಪಡೆಯುವ ದಂದೆಗೆ ಇಳಿದಿದ್ದಾರೆ ಇಂತವರಿಂದ ಕ್ಷೇತ್ರದ ಅಬಿವೃದ್ದಿ ಸಾಧ್ಯವಿಲ್ಲ ಎಂದು ಹರಿಹಾಯ್ದರು.ಕ್ಷೇತ್ರದ ಪ್ರಮುಖ ಯೋಜನೆಗಳ ಜಾರಿಗೆ ತಂದು ಕ್ಷೇತ್ರ ಅಬಿವೃದ್ದಿ ಪಡಿಸಲು ನಮ್ಮ ಸಹಕಾರವದೆ ಆದರೆ ಅದಿಕಾರ ಅಹಂಕಾರದಲ್ಲಿ ಏನೇನೋ ಮಾತನಾಡಿ ಪ್ರಚಾರ ಪ್ರಿಯನಾದರೆ ಸಹಿಸಲಾರೆ ಕ್ಷೇತ್ರದಲ್ಲಿ ಮಳೆ ಅಭಾವದಿಂದಾಗಿ ಬರಗಾಲ ಎದುರಾಗಿ ನಿಮ್ಮದೇ ಕೇಂದ್ರ ರಾಜ್ಯ ಸರ್ಕಾರವಿದ್ದು ವಿಶೇಷ ಅನುದಾನ ತಂದು ಅಬಿವೃದ್ದಿ ಪಡಿಸಿ ಎಂದು ಸಲಹೆ ನೀಡಿದರು .ಈ ವೇಳೆ ಕೆ.ಪಿ.ಸಿ.ಸಿ.ಎಸ್ಟಿ ಘಟಕ ರಾಜ್ಯಾಧ್ಯಕ್ಷರು ಕೆ.ಪಿ.ಪಾಲಯ್ಯ , 
 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮದ್. ಅರಸೀಕೆರೆ ಬ್ಲಾಕ್ ಅಧ್ಯಕ್ಷ ಕಮ್ಮತ್ತಹಳ್ಳಿ ಮಂಜಣ್ಣ. ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ. ಕ್ಷೇತ್ರ  ಸಂಯೋಜಕ ಕಲ್ಲೇಶ್ ರಾಜ್ ಪಟೇಲ್ . ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ. ಮಹಿಳಾ ಘಟಕ ಅಧ್ಯಕ್ಷೆ ಕೆಂಚಮ್ಮ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ವಿವಿಧ ಮುಂಚೂಣಿ ಘಟಕ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು.