ಸವದತ್ತಿ ಎಲ್ಲಮ್ಮ ದೇವಸ್ಥಾನ ಮಾದರಿ ಮಂಟಪದಲ್ಲಿ ಗಣೇಶನ ಪ್ರತಿಷ್ಠಾಪನೆ

ದಾವಣಗೆರೆ.ಸೆ.೪: ಜಾಲಿನಗರದ ಶ್ರೀರಾಮ್ ಫ್ರೆಂಡ್ ಗ್ರೂಪ್‌ ವತಿಯಿಂದ ಇಲ್ಲಿನ ಎಲ್ಲಮ್ಮ ದೇವಸ್ಥಾನದಲ್ಲಿ 4ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಈ ಬಾರಿ ಸವದತ್ತಿ ಎಲ್ಲಮ್ಮ ದೇವಸ್ಥಾನ ಮಾದರಿಯಲ್ಲಿ ಬೆಂಡಿನಲ್ಲಿ ಮಂಟಪ ರೂಪಿಸಲಾಗಿದ್ದು, ಅದರಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ.ಮೊದಲನೇ ವರ್ಷ ಅಯೋಧ್ಯೆ ಮಂದಿರ, ನಂತರ ಕಾಡಿನಲ್ಲಿ ಗಣಪ ಹೀಗೆ ಪ್ರತಿ ವರ್ಷವೂ ಒಂದೊಂದು ರೀತಿಯಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಅದ್ದೂರಿಯಾಗಿ ಗಣೇಶ್ ಮಹೋತ್ಸವ ಆಚರಣೆ ಮಾಡಲಾಗುವುದು ಎಂದು ಶ್ರೀರಾಮ್ ಫ್ರೆಂಡ್ಸ್ ಗ್ರೂಪ್ ನ ಗುರು ತಿಳಿಸಿದರು.ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು ಹನ್ನೆರಡು ದಿನಗಳ ಕಾಲ ಗಣೇಶ ದರ್ಶನಕ್ಕೆ ಇಡಲಾಗಿದ್ದು ಇದೇ ಸೆ.15ರಂದು ವಿಸರ್ಜನೆ ಮಾಡಲಾಗುವುದು. ಪ್ರತಿದಿನವೂ ಗಣಪತಿ ದರ್ಶನವನ್ನು ಸಾರ್ವಜನಿಕರು ಮಾಡಬಹುದು.