ಸವದತ್ತಿಯಲ್ಲಿ ಕರ್ನಾಟಕ ರಾಜ್ಯೋತ್ಸವ

ಸವದತ್ತಿ ನ 3 : ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶವೇ ತತ್ತರಿಸಿ ಹೋಗಿದೆ. ಹೀಗಿರುವಾಗ ವಿಜೃಂಭಣೆಯಿಂದ ಆಚರಿಸಬೇಕಾದ ಕನ್ನಡ ನಾಡಿನ ಹಬ್ಬ ಕರ್ನಾಟಕ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ಶಾಸಕ ಹಾಗೂ ಉಪಸಭಾದ್ಯಕ್ಷ ಆನಂದ ಮಾಮನಿಯವರು ಹೇಳಿದರು.
ಅವರು ಸ್ಥಳಿಯ ಮಾಮನಿ ಕಲ್ಯಾಣ ಮಂಟಪದಲ್ಲಿ ತಾಲೂಕಾ ಆಡಳಿತ ವತಿಯಿಂದ ಆಚರಿಸಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದೆರಡು ವರ್ಷಗಳಿಂದ ಅತಿವೃಷ್ಟಿಯಿಂದಾಗಿ ಸಾಕಷ್ಟು ತೊಂದರೆಗಳನ್ನು ನಾಡಿನ ಜನತೆ ಅನುಭವಿಸಿದ್ದಾರೆ. ರೈತರ ತೊಂದರೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ ಎಂದ ಅವರು ಈ ನಾಡು ನುಡಿ, ನೆಲ, ಜಲ ಮತ್ತು ಕನ್ನಡ ಬಾಷೆ ಉಳಿಸಿ ಬೆಳೆಸೋಣ . ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಿ ರಕ್ಷಿಸಿ, ಅಖಂಡ ಕರ್ನಾಟಕವನ್ನಾಗಿ ಉಳಿಸೂಣ ಎಂದು ಮಾಮನಿ ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಸರಕಾರಿ ಪ್ರೌಢಶಾಲೆ ದೇವಿಕೋಪ್ಪದ ಶಿಕ್ಷಕರಾದ ರಂಗನಾಥ ಎನ್ ವಾಲ್ಮೀಕಿ ಯವರು ಮಾತನಾಡಿ ನಾವೆಲ್ಲರೂ ಕನ್ನಡದ ಸ್ಥಿತಿ ಗತಿಯ ಬಗ್ಗೆ ತಿಳಿದು ಕೋಳಬೆಕಾಗಿದೆ. ಮತ್ತು ಈ ನೆಲ ಜಲ ಕನ್ನಡ ಭಾಷೆ ಉಳಿಸಿ ಬೆಳಸುವಲ್ಲಿ ನಾವೆಲ್ಲರು ಚಿಂತಿಸಬೇಕು. ಇವುಗಳನ್ನು ಉಳಿಸಿ ಬೇಳಸಬೆಕಾದರೆ ನಮ್ಮ ಪಾತ್ರವೇನು ಅರಿತು ಇವುಗಳನ್ನು ಬೆಳಸಬೇಕಾಗಿದೆ ಎಂದು ನುಡಿದರು.
ಸಮಾರಂಭದ ಪ್ರಾರಂಭದಲ್ಲಿ ಭುವನೇಶ್ವರೀಯ ಬಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಎ. ಎನ್. ಕಂಭೋಗಿ ಸ್ವಾಗತಿಸಿದರು.
ನಂತರ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರನ್ನು ತಾಲೂಕಾ ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಶಿಶು ಆಬಿವೃದ್ದಿ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಗಳನ್ನು ವಿತರಿಸಲಾಯಿತು.
ನಂತರ ತಾಲೂಕಿನಲ್ಲಿ ಸಾಲ ಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಮತ್ತು ಇತ್ತೀಚೆಗೆ ಬಾರಿ ಮಳೆಯಿಂದ ಸಿಡಿಲು ಬಡಿದು ಮರಣ ಹೂಂದಿದ ಕುಟುಂಬದವರಿಗೆ ಹಾಗೂ ಸಿಡಿಲು ಬಡಿದು ಕುರಿಗಳು ಮೃತಪಟ್ಟಿದ್ದವು. ಆ ಕುರಿಗಳ ಮಾಲಿಕರಿಗೂ ಸರಕಾರದಿಂದ ಬಂದ ಪರಿಹಾರಧನದ ಚೆಕ್ಕ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಪಂ ಅದ್ಯಕ್ಷ ವಿನಯಕುಮಾರ ದೇಸಾಯಿ, ಎಪಿಎಮ್‍ಸಿ ಅಧ್ಯಕ್ಷ ಪ್ರಕಾಶ ನರಿ, ಪಿಎಲ್‍ಡಿಬ್ಯಾಂಕ ಅದ್ಯಕ್ಷ ಜಗದೀಶ ಶಿಂತ್ರಿ, ಜಿ. ಪಂ. ಸದಸ್ಯ ಎಪ್ ಡಿ ಹದ್ದಣ್ಣವರ, ಎಮ್. ಎಸ್. ಹಿರೇಕುಂಬಿ, ಸಿಪಿಐ ಮಂಜುನಾಥ ನಡುವಿನಮನಿ, ಕರ್ನಾಟಕ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ತಹಶೀಲ್ದಾರರಾದ ಪ್ರಶಾಂತ ಬಿ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಎ ಎನ್ ಕಂಭೋಗಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚಿನ್ನಪ್ಪನವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾರ, ಜಿ. ಪಂ. ಅಧಿಕಾರಿ ಎಸ್ ಕೆ ಪಾಟೀಲ, ತಾಲೂಕಾ ವೈದ್ಯಾಧಿಕಾರಿ ಡಾ ಮಹೇಶ ಚಿತ್ತರಗಿ, ಶಿಕ್ಷಕ ಸಂಘದ ಅದ್ಯಕ್ಷ ಸುರೇಶ ಬೇಳವಡಿ, ಚಂದ್ರು ಅಳಗೋಡಿ ಮತ್ತು ಪುರಸಭೆ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.