ಸವಣೂರು ಕೊರೊನಾ ಮಾರ್ಗಸೂಚಿ ಉಲ್ಲಂಘನೆ: ಪ್ರಕರಣ ದಾಖಲು

ಕಡಬ , ಮೇ ೨- ಸವಣೂರಿನಲ್ಲಿ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿರುವುದಕ್ಕೆ ಪಿಕಪ್ ಮಾಲಕನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.
ಸವಣೂರಿನಲ್ಲಿ ಪಿಕಪ್ ( ಞಂ ? ೨೧, ೭೬೦೬) ಮಾಲಕ ರವಿನಾರಾಯಣ ಎಂಬವರು ೧೭ ಜನ ಕೂಲಿಕಾರ್ಮಿಕರನ್ನು ಪಿಕಪ್ ನಲ್ಲಿ ಪುತ್ತೂರು ಕಡೆಗೆ ಸಾಗಿಸುತ್ತಿದ್ದಾಗ ಸವಣೂರು ಜಂಕ್ಷನ್‌ನ ಪೊಲೀಸ್ ಚೆಕ್ ಪಾಯಿಂಟ್ ನಲ್ಲಿ ಪೊಲೀಸರು ಪಿಕಪನ್ನು ನಿಲ್ಲಿಸಿ ವಶಕ್ಕೆ ಪಡೆದುಕೊಂಡರು.
ಬಳಿಕ ಪಿಕಪನ್ನು ಬೆಳ್ಳಾರೆ ಠಾಣೆಗೆ ತಂದು ಮಾಲಕನ ವಿರುದ್ಧ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯ ಪ್ರಕರಣ ದಾಖಲಿಸಲಾಗಿದೆ.