ಸಲ್ಲಿಕೆಯಾದ 7 ನಾಮಪತ್ರಗಳು ಪುರಸ್ಕೃತ, 3 ಅಭ್ಯರ್ಥಿಗಳು ಕ್ರಮಬದ್ಧ:ವಿ.ವಿ.ಜ್ಯೋತ್ಸ್ನಾ

ಕಲಬುರಗಿ,ನ.24: ಗುಲಬರ್ಗಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಬುಧವಾರ ಇಲ್ಲಿನ ಡಿ.ಸಿ ಕಚೇರಿಯಲ್ಲಿ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ನಾಮಪತ್ರಗಳ ಪರಿಶೀಲನೆ ಮಾಡಿದರು.
ಚುನಾವಣೆಗೆ ಒಟ್ಟಾರೆ ಮೂವರು ಅಭ್ಯರ್ಥಿಗಳಿಂದ ಒಟ್ಟು 7 ನಾಮಪತ್ರಗಳು ಸಲ್ಲಿಕೆಯಾಗಿದ್ದವು.
ಬಿ.ಜೆ.ಪಿ ಪಕ್ಷದ ಅಭ್ಯರ್ಥಿಯಾಗಿ ಬಸವರಾಜ ಗಳಂಗಪ್ಪ ಪಾಟೀಲ ಅವರು ಸಲ್ಲಿಸಿದ 4 ನಾಮಪತ್ರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶಿವಾನಂದ ಭೀಮರಾಯ ಅವರು ಸಲ್ಲಿಸಿದ 2 ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಕೋಡ್ಲಿ ಅವರು ಸಲ್ಲಿಸಿದ 1 ನಾಮಪತ್ರ ಪುರಸ್ಕತಗೊಂಡಿದ್ದು, ಒಟ್ಟಾರೆ 3 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ನ.26 ನಾಮಪತ್ರ ಹಿಂಪಡೆಯಲು‌ ಕೊನೆಯ ದಿನವಾಗಿದ್ದು, ಅಂದು ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ವಿವರ ಲಭ್ಯವಾಗಲಿದೆ.