ಸಲ್ಮಾನ್ ಖಾನ್ ವ್ಯಾಕ್ಸಿನ್ ನ ಮೊದಲ ಡೋಸ್ ಚುಚ್ಚಿಸಿಕೊಂಡರು, ನಿರ್ಮಾಪಕ ತೌರಾನಿ ಮೊದಲ ಡೋಸ್ ಚುಚ್ಚಿಸಿಕೊಂಡರೂ ಕೊರೊನಾ ಪಾಸಿಟಿವ್!

ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಕೊರೊನಾ ವೈರಸ್ ನಿಂದ ಪಾರಾಗಲು ಕೋವಿಶೀಲ್ಡ್ ನ ಮೊದಲ ಡೋಸ್ ಚುಚ್ಚಿಸಿಕೊಂಡರು.
ಈ ಮಾತನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸಲ್ಮಾನ್ ಲೀಲಾವತಿ ಹಾಸ್ಪಿಟಲ್ ಗೆ ತೆರಳಿ ಲಸಿಕೆ ಚುಚ್ಚಿಸಿಕೊಂಡರು.ಇದಕ್ಕಿಂತ ಮೊದಲು ಸಂಜಯ್ ದತ್ತ್ ಕೂಡ ಬುಧವಾರದಂದು ಕೊರೊನಾ ವ್ಯಾಕ್ಸಿನ್ ನ ಮೊದಲ ಡೋಸ್ ಚುಚ್ಚಿಸಿಕೊಂಡಿದ್ದಾರೆ. ಇದನ್ನು ಅವರೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಫಿಲ್ಮ್ ಪ್ರೊಡ್ಯೂಸರ್ ರಮೇಶ್ ತೌರಾನೀ ಕೋವಿಡ್ ಪಾಸಿಟಿವ್ ಆಗಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತ ಕೆಲವು ದಿನ ಮೊದಲು ತಾನು ವ್ಯಾಕ್ಸಿನ್ ನ ಮೊದಲ ಡೋಸ್ ಚುಚ್ಚಿಸಿ ಕೊಂಡಿದ್ದೇನೆ. ಆದರೂ ಕೊರೊನಾ ಪೊಸಿಟಿವ್ ಆಗಿದ್ದೇನೆ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ .


“ನಾನು ಟೆಸ್ಟ್ ನಲ್ಲಿ ಪಾಸಿಟಿವ್ ಆಗಿದ್ದೇನೆ. ನಾನು ಮಹಾನಗರಪಾಲಿಕೆಗೆ ಇದರ ಮಾಹಿತಿ ಕೂಡ ನೀಡಿದ್ದೇನೆ.ಹಾಗೂ ಔಷಧಿ ಕೂಡ ಪಡೆಯುತ್ತಿದ್ದೇನೆ. ಕಳೆದ ಎರಡು ವಾರಗಳಲ್ಲಿ ನನ್ನ ಸಂಪರ್ಕದಲ್ಲಿದ್ದರು ಕೊರೊನಾ ಪರೀಕ್ಷೆ ಮಾಡಿಸಿ ಎಂದಿದ್ದಾರೆ. “ನಾನು ಮೊದಲ ಡೋಸ್ ಚುಚ್ಚಿಸಿಕೊಂಡಿದಿದ್ದೇನೆ .ಬೇಗನೆ ಗುಣವಾಗುವ ನಿರೀಕ್ಷೆಯಲ್ಲಿದ್ದೇನೆ” ಎಂದಿದ್ದಾರೆ.
ಇದಕ್ಕಿಂತ ಮೊದಲು ಬುಧವಾರ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ರ ಟೀಮ್ ಅಮೀರ್ ಗೆ ಕೊರೊನಾ ಪಾಸಿಟಿವ್ ಎಂದು ಘೋಷಣೆ ಮಾಡಿದೆ.
“ಅವರು ಮನೆಯಲ್ಲಿದ್ದಾರೆ, ಕ್ವಾರಂಟೆನ್ ನಲ್ಲಿ ಇದ್ದಾರೆ ” ಎಂದು ಶೇರ್ ಮಾಡಿದ್ದಾರೆ.. ಸೋಮವಾರದಂದು ಕಾರ್ತಿಕ್ ಆರ್ಯನ್ ಕೂಡಾ ಪೋಸಿಟಿವ್ ಆಗಿದ್ದಾರೆ .ರಣಬೀರ್ ಕಪೂರ್, ಮನೋಜ್ ಬಾಜಪೇಯಿ ಸಿದ್ದಾರ್ಥ ಚತುರ್ವೇದಿ, ತಾರಾ ಸುತಾರಿಯ, ಸತೀಶ್ ಕೌಶಿಕ್ ಹೀಗೆ ಬಾಲಿವುಡ್ ನಅನೇಕರು ಕೊರೊನಾ ಪಾಸಿಟಿವ್ ಆಗಿದ್ದಾರೆ.

ಜೂಹೀ ಚಾವ್ಲಾ ನಂತರ ಈಗ ಸಮಂಥಾರಿಂದಲೂ ಕಂಗನಾರಿಗೆ ಪ್ರಶಂಸೆ

ಫಿಲ್ಮ್ ’ಥಲೈವೀ’ ಟ್ರೈಲರ್ ನೋಡಿ ಸಮಂಥಾ ಅವರು “ಕಂಗನಾ ನಮ್ಮ ಪೀಳಿಗೆಯ ಬಹದ್ದೂರ್ ಮತ್ತು ಸಮರ್ಥ ನಟಿ “ಎಂದು ಪ್ರಶಂಸಿಸಿದ್ದಾರೆ.
ಇದಕ್ಕಿಂತ ಮೊದಲು ಜೂಹೀಚಾವ್ಲಾ ಕೂಡ ಕಂಗನಾರಿಗೆ ಶಹಬಾಸ್ ಅಂದಿದ್ದಾರೆ . ಕಂಗನಾ ರ ಮುಂದಿನ ಫಿಲ್ಮ್ ಥಲೈವಿ ಟ್ರೈಲರ್ ಜಾರಿಯಾದ ೨೪ ಗಂಟೆಯಲ್ಲಿ ಒಂದು ಕೋಟಿಗೂ ಹೆಚ್ಚು ಜನ ಅದನ್ನುವೀಕ್ಷಿಸಿದ್ದಾರೆ ಹಾಗೂ ಕಂಗನಾರ ಅಭಿನಯಕ್ಕೆ ಪ್ರಶಂಸೆಗಳ ಮಹಾಪೂರ ಹರಿದು ಬಂದಿದೆ.


ಟೈಲರ್ ನಲ್ಲಿ ಕಂಗನಾರ ಲುಕ್ಕ್ ಮತ್ತು ಅಭಿನಯಕ್ಕೆ ಜೂಹೀ ಚಾವ್ಲಾ ತುಂಬಾ ಹೊಗಳಿದ್ದಾರೆ. ಇದೀಗ ಸಮಂಥಾ ಅಕ್ಕಿನೇನಿ ಅವರೂ ಟ್ರೈಲರ್ ನೋಡಿ “ಕಂಗನಾ ಇಂದಿನ ಪೀಳಿಗೆಯ ಬಹದ್ದೂರ್ ನಟಿ, ನಮ್ಮ ಪೀಳಿಗೆಯ ಸಾಹಸಿ ಮತ್ತು ನಿರ್ವಿವಾದ ರೂಪದಿಂದ ಅತ್ಯುತ್ತಮ ನಟಿ .ಈ ಫಿಲ್ಮ್ ನ ಜಾದು ಟಾಕೀಸಿನಲ್ಲಿ ನೋಡಲು ಉತ್ಸುಕರಾಗಿದ್ದೇವೆ” ಎಂದಿದ್ದಾರೆ .

ಸಮಂಥಾ ಈ ಮೊದಲು ಕಂಗನಾರನ್ನು ಮಣಿಕರ್ಣಿಕಾ ಫಿಲ್ಮ್ ರಿಲೀಸ್ ಆದಾಗಲೂ ಹೊಗಳುತ್ತಾ, “ಈತನಕವೂ ಅವರ ಮಣಿಕರ್ಣಿಕಾ ಫಿಲ್ಮ್ ನ ಅಭಿನಯವನ್ನು ನನ್ನ ತಲೆಯಿಂದ ಹೊರಹಾಕಲು ಸಾಧ್ಯ ಆಗಿಲ್ಲ. ಅವರ ಅಭಿನಯ ನನ್ನನ್ನು ಅಷ್ಟು ಕಾಡಿದೆ. “ಕಂಗನಾ , ನಮ್ಮ ಬೆಂಬಲ ನಿಮಗೆ ಸದಾ ಇದೆ “ಎಂದಿದ್ದರು.

ಫಿಲ್ಮ್ ಮೇಕರ್ ಕೊರಿಯೋಗ್ರಾಫರ್ ಫರಾಹ ಖಾನ್ ಮಾಸ್ಕ್ ಸರಿಸಿ ಮಾಹಿನಹಣ್ಣಿನ ಪರಿಮಳ ಸವಿದಾಗ…….

ಫಿಲ್ಮ್ ಮೇಕರ್ ಕೊರಿಯೋಗ್ರಾಫರ್ ಫರಾಹ್ ಖಾನ್ ಶಾಪಿಂಗ್ ಮಾಡಲು ಹೊರಟು ಅನೇಕರ ಟೀಕೆಗೆ ಗುರಿಯಾಗಬೇಕಾಯಿತು .ಅವರು ರಸ್ತೆ ಬದಿಯ ಸೀಜನ್ ಫ್ರುಟ್ಸ್ ಮಾವಿನಹಣ್ಣನ್ನು ಖರೀದಿಸಲು ರಸ್ತೆ ಬದಿಯ ಅಂಗಡಿಗೆ ಹೋಗಿದ್ದರು. ಆದರೆ ಅವರು ಉತ್ತಮ ಮಾವಿನಹಣ್ಣನ್ನು ಆಯ್ಕೆಮಾಡುವ ಗಡಿಬಿಡಿಯಲ್ಲಿ ಮುಖದ ಮಾಸ್ಕ್ ಕೆಳಗೆ ಸರಿಸಿ ಒಂದೆರಡು ಮಾವಿನಹಣ್ಣಿನ ಪರಿಮಳವನ್ನು ಆಘ್ರಾಣಿಸಿದರು.
ಇತ್ತ ಮುಖದ ಮಾಸ್ಕನ್ನು ಸರಿಸಿದ ಈ ವೀಡಿಯೋ ಕಂಡು ಅನೇಕ ಯೂಸರ್ಸ್ ಗಳು ತರಾಟೆಗೆ ಎಳೆದರು. “ಮೂಗಿನ ಮೂಲಕ ಇನ್ಫೆಕ್ಷನ್ ಈಗಾಗಲೇ ತಲುಪಿದೆ” ಎಂದಿದ್ದಾರೆ.


ಮುಂಬೈಯಲ್ಲಿ ಹೆಚ್ಚುತ್ತಿರುವ ಕೊರೊನಾ ಕೇಸ್ ನಿಂದ ಮಾಸ್ಕ್ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಎಲ್ಲಾ ಕಡೆ ಜನಜಾಗೃತಿ ನಡೆಯುತ್ತಿದೆ.
ಆದರೆ ಫರಾಹ ಖಾನ್ ಮಾರ್ಕೆಟ್ ನಲ್ಲಿ ಮಾವಿನಹಣ್ಣನ್ನು ಮೂಸಲು ಹೊರಟಿದ್ದರು! ಇವರ ನಿರ್ಲಕ್ಷ್ಯವನ್ನು ಗಮನಿಸಿದ ಯೂಸರ್ಸ್ ಗಳು ಈ ಕೋವಿಡ್ ಕಾಲದಲ್ಲಿ ಯಾರು ಆ ಮಾವಿನ ಹಣ್ಣನ್ನು ಅದೂ ಮಹಾರಾಷ್ಟ್ರದಲ್ಲಿ ಮೂಸಿ ನೋಡಲು ಹೋಗುತ್ತಾರೆ? ಕಾಮನ್ಸೆನ್ಸ್ ಮಾರಿ ಮಾವಿನಹಣ್ಣನ್ನು ಖರೀದಿಸಿದಿರಾ? ಎಂಬ ಪ್ರಶ್ನೆಗಳ ಟೀಕೆಗಳು ಹರಿದುಬಂದಿವೆ.